ಮಂಗಳೂರು: ಮಂಗಳೂರು ನಗರದ ಹಳೆಯದಾದ ಪಾಂಡೇಶ್ವರದಿಂದ ರೊಜಾರಿಯೋ ಚರ್ಚ್ ರಸ್ತೆಯು ತೀರ ಹಗೆಟ್ಟಿರುವುದರಿಂದ ಇದರ ಅಭಿವೃದ್ಧಿ ಅಗತ್ಯವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ರಾಜ್ಯ ಸರ್ಕಾರದ ಮೂರನೆ ನಗರೋತ್ತನ ಯೋಜನೆಯಲ್ಲಿ ಈ ರಸ್ತೆಗೆ 1 ಕೋಟಿ ಅನುದಾನ ಮಂಜೂರು ಮಾಡಿಸಿ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಈ ರಸ್ತೆಯನ್ನು ಮುಂದಿನ ಒಂದು ತಿಂಗಳ ಒಳಗೆ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅರ್ಪಿಸಲಾಗುವುದು. ನಗರದ ರಸ್ತೆಗಳ ಬದಿಗೆ ಫುಟ್ ಪಾತ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಮಂಗಳೂರು ನಗರವನ್ನು ಮಾದರಿ ನಗರವನ್ನಾಗಿ ಮಾಡುವ ಉದ್ದೇಶ ನಮ್ಮೆಲ್ಲರ ಮೇಲಿದೆ ಎಂದರು.

ಮಂಗಳೂರು ನಗರದ ಬಹುತೇಕ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಲಾಗಿದೆ. ಇನ್ನು ಉಳಿದಿರುವ ರಸ್ತೆಗಳನ್ನು ಆದಷ್ಟು ಶೀಘ್ರದಲ್ಲಿ ಕಾಂಕ್ರೀಟಿಕರಣ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೊರೇಟರ್ ಅಬ್ದುಲ್ ಲತೀಫ್ , ಚರ್ಚ್ ಧರ್ಮಗುರುಗಳಾದ ಫಾ. ಜೆ.ಬಿ.ಕ್ರಾಸ್ತಾ, ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲಾರ್ಟ್ ಪಿಂಟೊ, ನಗರಪಾಲಿಕೆ ಸದಸ್ಯೆ ಅಪ್ಪಿ, ಆಶಾ ಡಿಸಿಲ್ವಾ,ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಜೀವನ್ ಕುಮಾರ್,ಜಾನ್ ಬ್ಯಾಪ್ಟಿಸ್ಟ್ ಡಿ’ಸೋಜಾ, ವಾರ್ಡ್ ಅಧ್ಯಕ್ಷ ಸುಧಾಕರ್ ಶೆಣೈ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಸದಾಶಿವ ಶೆಟ್ಟಿ, ಉಮೇಶ್, ಸಲಾಮ್, ಕೃಷ್ಣ ಶೆಟ್ಟಿ, ಐಡಾ ಕುಟಿನ್ಹಾ, ಕೆ.ಜಿ.ಪಿಂಟೊ, ಅಲೆಕ್ಸ್, ಜಾನ್ ಡಿ’ಸೋಜಾ, ಜೆರಾಲ್ಡ್, ಗಣೇಶ್, ಸುಪ್ರೀತ್ ಪೂಜಾರಿ, ಲಕ್ಷ್ಮೀ, ಅಧಿಕಾರಿಗಳಾದ ಲಿಂಗೇಗೌಡ, ಪಾರ್ವತಿ , ಗಣಪತಿ, ಗುತ್ತೀಗೆದಾರ ಎಮ್.ಜಿ.ಹುಸೈನ್ ಮುಂತಾದವರಿದ್ದರು.