ಮಂಗಳೂರು: ಮಂಗಳೂರಿಗೆ ಅಂಡರ್ ಗ್ರೌಂಡ್ ಕೇಬಲ ಅಳವಡಿಸಬೇಕು ಎನ್ನುವ ಸುದೀರ್ಘ ಕನಸು ನನಸಾಗುತ್ತಿದ್ದು ಶಾಸಕ ಜೆ.ಆರ್.ಲೋಬೊ ಅವರ ಪ್ರಯತ್ನದ ಫಲವಾಗಿ ಮೊದಲ ಹಂತದಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಬಲ ಅಳವಡಿಸುವ ಕ್ರಮ ಆರಂಭವಾಗಿದೆ.

ಇದು ಮೊದಲ ಹಂತದಲ್ಲಿ 6 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದ್ದು ಎರಡನೇ ಹಂತದಲ್ಲಿ ಇನ್ನೂ ಹೆಚ್ಚಿನ ಕಾಮಗಾರಿ ಎರಡನೇ ಹಂತದಲ್ಲಿ ಆರಂಭವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.

ಇಷ್ಟರವರೆಗೆ ಇಲೆಟ್ರಿಕಲ್ ಕೇಬಲಗಳನ್ನು ಮೇಲಿನಿಂದಲೇ ಅಳವಡಿಸುವ ಕ್ರಮವಿತ್ತು. ಇದನ್ನು ಅಂಡರ್ ಗ್ರೌಂಡ್ ನಲ್ಲಿ ಅಳವಡಿಸಿದರೆ ಸುರಕ್ಷಿತ ಎನ್ನುವ ಕಾರಣದಿಂದ ಅಂಡರ್ ಗ್ರೌಂಡ್ ಕೇಬಲ ಅಳವಡಿಸುವ ಕ್ರಮವನ್ನು ಕೈಗೆತ್ತಿಕೊಳ್ಳಲಾಯಿತು.
ಕರಾವಳಿ ಸರ್ಕಲ್ ನಿಂದ ಬೆಂದೂರವೆಲ್ ಹಂಪನಕಟ್ಟೆ ಮೂಲಕ ಎ.ಬಿ.ಶೆಟ್ಟಿ ಸರ್ಕಲ್ ವರೆಗೆ ಕಾಮಗಾರಿ ನಡೆಯುತ್ತಿದೆ. ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಮಂಜಪ್ಪ ಅವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಇದು ಸ್ಮಾರ್ಟ್ ಸಿಟಿ ಕಾರ್ಯಕ್ರಮವೆಂದು ಜನರು ತಪ್ಪಾಗಿ ತಿಳಿದಿದ್ದು ಇದು ಖುದ್ದು ಶಾಸಕ ಜೆ.ಆರ್.ಲೋಬೊ ಅವರ ಉತ್ಸಾಹದಿಂದ ಮತ್ತು ನಿರಂತರವಾಗಿ ಪ್ರಯತ್ನಿಸಿ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 6 ಕೋಟಿ ಕಾಮಗಾರಿಯನ್ನು ಮಂಜೂರು ಮಾಡಿಸಿದ್ದಾರೆ. ಮುಂದಿನ ಹಂತದಲ್ಲಿ ಹೆಚ್ಚಿನ ಅನುದಾನ ಪಡೆಯಲು ಇದು ನೆರವಾಗುತ್ತದೆ ಎನ್ನುವ ವಿಶ್ವಾಸವನ್ನು ಶಾಸಕ ಜೆ.ಆರ್.ಲೋಬೊ ಅವರು ವ್ಯಕ್ತಪಡಿಸಿದ್ದಾರೆ.

ಎಲ್ಲವೂ ಪರಿಪೂರ್ಣವಾಗಿ ಅಂಗೀಕಾರವಾದರೆ ಮಂಗಳೂರು ನಗರದಲ್ಲಿ ಅಂಡರ್ ಗ್ರೌಂಡ್ ಕೇಬಲ ಅಳವಡಿಸಿ ಸುರಕ್ಷಿತವಾಗಿ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತದೆ.

ಮಂಗಳೂರಿಗೆ 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕೇಬಲ್: ಶಾಸಕ ಜೆ.ಆರ್.ಲೋಬೊ

ಮಂಗಳೂರಿಗೆ 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕೇಬಲ್: ಶಾಸಕ ಜೆ.ಆರ್.ಲೋಬೊ

ಮಂಗಳೂರಿಗೆ 6 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕೇಬಲ್: ಶಾಸಕ ಜೆ.ಆರ್.ಲೋಬೊ