ಮಂಗಳೂರು: ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ 11 ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 2೦೦ ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದ್ದಾರೆ. 37 ನೇ ವಾರ್ಡ್ ಮರೋಳಿ ರೇಗೋ ಬಾಗ್ ನಿಂದ ಜಯನಗರ 2 ನೇ ಅಡ್ಡ ರಸ್ತೆ ವರೆಗೆ ರಸ್ತೆ ಕಾಂಕ್ರೀಟಿಕರಣ ಮಾಡಲು 15 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದೆ.

21 ನೇ ವಾರ್ಡ್ ಪದವು ಪಶ್ಚಿಮ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರದಿಂದ ಮುಗುರೋಡಿ ಪ್ರೀತಿನಗರ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ ರೂಪಾಯಿ, 35 ನೇ ವಾರ್ಡ್ ಪದವು ಸೆಂಟ್ರಲ್ ಕುಚ್ಚಿಕಾಡು ನಾಗಬನದಿಂದ ಕಾನಡ್ಕದವರೆಗೆ ರಸ್ತೆ ಡಾಂಬರೀಕರಣಕ್ಕೆ 15 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದೆ ಎಂದಿದ್ದಾರೆ.

51 ನೇ ವಾರ್ಡ್ ಅಳಪೆ ಉತ್ತರ ಪಡೀಲು ನಿಡ್ಡೇಲು ರಸ್ತೆಯ ಕಾಂಕ್ರೀಟಿಕರಣಕ್ಕೆ 15 ಲಕ್ಷ ರೂಪಾಯಿ,36 ನೇ ವಾರ್ಡ್ ಪದವು ಪೂರ್ವ ಕುಲಶೇಖರ ಡೈರಿ ಮುಖ್ಯ ರಸ್ತೆ ಡಾಮರೀಕರಣಕ್ಕೆ 15 ಲಕ್ಷ ರೂಪಾಯಿಯನ್ನು ನಿಗದಿ ಪಡಿಸಿದೆ. 26 ನೇ ವಾರ್ಡ್ ದೇರೇಬೈಲು ನೈರುತ್ಯ ಕಲಾವು ರಸ್ತೆ ಕಾಂಕ್ರೀಟಿಕರಣಕ್ಕೆ ಮತ್ತು ಸೇತುವೆ ನಿರ್ಮಾಣ ಮಾಡಲು 35 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದೆ.

53 ನೇ ವಾರ್ಡ್ ಬಜಾಲು ಅಮೇವುನಿಂದ ಕಲ್ಲಗುಡ್ಡೆ ತನಕ ರಸ್ತೆ ಡಾಂಬರೀಕರಣಕ್ಕೆ 15 ಲಕ್ಷ ರೂಪಾಯಿ, 49 ನೇ ವಾರ್ಡ್ ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಸೆಂಟ್ರಲ್ ಎಕ್ಸೈಸ್ ವಸತಿ ಗೃಹಕ್ಕೆ ಹೋಗುವ ರಸ್ತೆ ಕಾಂಕ್ರೀಟಿಕರಣಕ್ಕೆ 10 ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದೆ.

49 ನೇ ವಾರ್ಡ್ ಕಂಕನಾಡಿ ನಾಗುರಿ ಗುಡ್ಡೆ ತೋಟ ರಸ್ತೆ ಡಾಂಬರೀಕರಣಕ್ಕೆ 15 ಲಕ್ಷ ರೂಪಾಯಿ, 54 ನೇ ವಾರ್ಡ್ ಜಪ್ಪಿನಮೊಗರು ಕಂರ್ಭಿಸ್ಥಾನ ದ್ವಾರದಿಂದ ಸಂಗಮ್ ಫ್ರೆಂಡ್ಸ್ ಕ್ಲಬ್ ನವರೆಗೆ ರಸ್ತೆ ಕಾಂಕ್ರೀಟಿಕರಣ ಹಾಗೂ ಚರಂಡಿ ನಿರ್ಮಾಣ ಮಾಡಲು 15 ಲಕ್ಷ ರೂಪಾಯಿಯನ್ನು ಒದಗಿಸಲಾಗಿದೆ.

30 ಲಕ್ಷ ರೂಪಾಯಿಯನ್ನು 58 ನೇ ವಾರ್ಡ್ ಬೋಳಾರ ಲೀವೆಲ್ ಮುಖ್ಯ ರಸ್ತೆ ಕಾಂಕ್ರೀಟಿಕರಣಕ್ಕೆ ಮಂಜೂರು ಮಾಡಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ವಿವರಿಸಿದ್ದಾರೆ.