ಮಂಗಳೂರು.ಅ, 23: ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು 2.31 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದರ ಮೂಲಕ ಈ ವರ್ಷದ ದೀಪಾವಳಿ ಹಬ್ಬವನ್ನು ಆಚರಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು, ಕೊಡಿಯಾಲ್ ಬೈಲ್, ಶಕ್ತಿನಗರ, ಅತ್ತಾವರ, ಮರೋಳಿ, ಅಳಪೆ ಉತ್ತರ ಮುಂತಾದ ವಾರ್ಡ್‍ಗಳಲ್ಲಿ ಅಭಿವೃದ್ಧಿಯ ವಿವಿಧ ಕಾಮಗಾರಿಗಳನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಶಂಕುಸ್ಥಾಪನೆ ಮಾಡಿದರು. ಜಪ್ಪಿನಮೊಗರು ಕಲ್ಲತಡಮೆ ರಸ್ತೆ ಅಭಿವೃದ್ಧಿಗೆ 40 ಲಕ್ಷ, ಕೊಡಿಯಾಲ್ ಬೈಲ್ ವಿವೇಕ್ ನಗರದಲ್ಲಿ 76 ಲಕ್ಷದ ವಿವಿಧ ಕಾಮಗಾರಿಗಳು, ಶಕ್ತಿನಗರ ವಾರ್ಡಿನ ಮೇಗಿನಮನೆ ರಸ್ತೆ ಅಭಿವೃದ್ಧಿಗೆ 25 ಲಕ್ಷ, ಅತ್ತಾವರ ವಾರ್ಡಿನ ಬಾಬುಗುಡ್ಡೆ ರಸ್ತೆ ಅಭಿವೃದ್ಧಿಗೆ 25 ಲಕ್ಷ, ಮರೋಳಿ ವಾರ್ಡಿನ ನಟ್ಟಿ ಮನೆ ರಸ್ತೆ ಅಭಿವೃದ್ಧಿಗೆ 25 ಲಕ್ಷ, ಅಳಪೆ ವಾರ್ಡಿನ ಕನ್ನಗುಡ್ಡೆಯ ರಸ್ತೆ ಕಾಮಗಾರಿಗಳಿಗೆ 40 ಲಕ್ಷ . ಈ ಎಲ್ಲಾ ಪ್ರದೇಶದ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೇರವೇರಿಸಿ ಮಾತನಾಡಿದ ಶಾಸಕ ಶ್ರಿ ಜೆ.ಆರ್ ಲೋಬೊರವರು ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಶುಭಾಶಯವನ್ನು ನೀಡಿ ಬೆಳಕಿನ ಹಬ್ಬದ ಈ ಶುಭ ಸಂದರ್ಭದಲ್ಲಿ ಮಂಗಳೂರು ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸುವುದರ ಮೂಲಕ ನಾವಿಂದು ದೀಪಾವಳಿಯ ಹಬ್ಬವನ್ನು ಆಚರಿಸುತ್ತಿದ್ದೇವೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಲಾವಾರು ಒಳ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು ಮುಂದಿನ ದಿನಗಳಲ್ಲಿ ಮಂಗಳೂರು ನಗರ ಪ್ರದೇಶದ ಹೆಚ್ಚಿನ ಒಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಲಾಗುವುದು ಎಂದು ಹೇಳಿದರು. ನಗರದ ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿಯಾದರೆ ಗ್ರಾಮೀಣ ಬಾಗಗಳಲ್ಲೂ ಜನರು ನೆಲೆಸಲು ಸಾದ್ಯವಾಗುತ್ತದೆ ಈ ಮೂಲಕ ನಗರ ಪ್ರದೇಶದಲ್ಲಿ ಜನದಟ್ಟನೆ ನಿಯಂತ್ರಣ ಹೊಂದಿ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗುವುವ ಸಾದ್ಯತೆ ಇದೆ ಇದರಿಂದ ಮುಂದಿನ ದಿನಗಳಲ್ಲಿ ಮಹಾನಗರ ವ್ಯಾಪ್ತಿಯಲ್ಲಿರುವ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.

ಮಹಾನಗರ ಪಾಲಿಕೆಯ ಮಾಹಾಪೌರರಾದ ಶ್ರೀ ಮಹಾಬಲ ಮಾರ್ಲ, ಸ್ಥಳೀಯ ನಗರ ಪಾಲಿಕೆಯ ಸದಸ್ಯರಾದ ಶ್ರೀ ಪ್ರಕಾಶ್ ಸಾಲ್ಯನ್, ಶ್ರೀಮತಿ ಕೆ.ಜುಬೇದಾ, ಶ್ರೀಮತಿ ಶೈಲಜಾ, ಕೇಶವ ಮರೋಳಿ, ಬಿ. ಪ್ರಕಾಶ್, ವಾರ್ಡ್ ಅಧ್ಯಕ್ಷ ದೇವಪ್ಪ ಸುವರ್ಣ, ಗಂಗಾದರ ಪೂಜಾರಿ, ಜಯಂತ ಪೂಜಾರಿ, ಕಾಂಗ್ರೆಸ್ ಮುಖಂಡರುಗಳಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅಬ್ದುಲ್ ಅಜೀಜ್, ಟಿ.ಕೆ ಸುದೀರ್, ಡೆನ್ನಿಸ್ ಡಿ’ಸಿಲ್ವ, ರಮಾನಂದ ಪೂಜಾರಿ, ಕೃತಿನ್ ಕುಮಾರ್, ಜಯಕರ ಸಮರ್ಥ ಮುಂತಾದವರು ಉಪಸ್ಥಿತರಿದ್ದರು.

road_project_02road_project_03road_project_04road_project_05road_project_06road_project_07road_project_08road_project_09