ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ಹಾಗೂ 52ನೇ ಕಣ್ಣೂರು ವಾರ್ಡ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕೆ.ಎಂ.ಸಿ ಅಸ್ಪತ್ರೆ, ಎ.ಜೆ. ಆಸ್ಪತ್ರೆ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಕಣ್ಣೂರು ಅಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಭಾನುವಾರ ನಡೆದ ಐದನೆ ‘ಉಚಿತ ವೈದ್ಯಕೀಯ ತಪಾಸಣಾ’ ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ಶಿಬಿರದ ಲಾಭವನ್ನು ಪಡೆದರು.
ಶಿಬಿರವನ್ನು ಉದ್ಘಾಟಿಸಿ ಮಾತನಡಿದ ಶಾಸಕರು, ರಾಜ್ಯ ಸರಕಾರ ನಗರ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 7 ಅರೋಗ್ಯ ಕೇಂದ್ರ ಗಳನ್ನು ಮಂಜೂರು ಮಾಡಲಾಗಿದೆ ಎಂದರು. ಇತಂಹ ಶಿಬಿರಗಳಿಂದ ಜನರಿಗೆ ಅರೋಗ್ಯ ತಪಾಸಣೆ ಮಾಡಲು ಅವಕಾಶ ಸಿಗುತ್ತದೆ. ಜನ ಸೇವೆಯ ಮೂಲಕ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ನನ್ನ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡಿನಲ್ಲಿ ಇಂತಹ ಹಲವರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಈಗಾಗಲೆ ಕ್ಷೇತ್ರದ ನಾಲ್ಕು ಭಾಗದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿರುವುದು ನನಗೆ ಸಂತೊಷ ತಂದ್ದಿದೆ, ಎಂದರು.
ಈ ಸಂದರ್ಭದಲ್ಲಿ ನಾಗೇಂದ್ರ ಕುಮಾರ್, ಪ್ರಭಾಕರ ಶ್ರೀಯಾನ್, ರಫೀಕ್ ಕಣ್ಣೂರು, ಹಮೀದ್ ಕಣ್ಣೂರು, ಸದಾಶಿವ್ ಅಮೀನ್, ಮೋಹನ್ ಪಡೀಲ್, ಕೇಂದ್ರ ಬ್ಯಾರಿ ಪರಿಷತ್ ಆಧ್ಯಕ್ಷ ಡಿ.ಎಮ್. ಅಸ್ಲಮ್, ಸ್ಥಳಿಯ ಮುಖಂಡರಾದ ಅಬೀಬುಲ್ಲಾ, ಅಹ್ಮದ್ ಶರೀಫ್, ನಮೀತಾ ಡಿ. ರಾವ್, ನಸೀರ್ ಅಹ್ಮದ್, ಸದಾನಂದ, ಚಂದ್ರಶೇಖರ್ ಪೂಂಜ ಮೊದಲಾದವರು ಉಪಸ್ಥಿತರಿದ್ದರು.