ಮಂಗಳೂರು: ತಲೆಹೊರೆ ಕಾರ್ಮಿಕರಿಗೆ ಇನ್ನು ಹದಿನೈದು ದಿನಗಳ ಒಳಗೆ ಐಡೆಂಟಿಟಿ ಕಾರ್ಡ್ ಕೊಡುವಂತೆ ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು ಕದ್ರಿಯಲ್ಲಿರುವ ಶಾಸಕರ ಕಚೇರಿಯಲ್ಲಿ ತಲೆಹೊರೆ ಕಾರ್ಮಿಕರ ಅಹವಾಲು ಸ್ವೀಕರಿಸಿ ಮಾತನಾಡುತ್ತಾ ತಾವು ತಿಳಿಸಿದ ಮೇಲು ಐಡೆಂಟಿಟಿ ಕಾರ್ಡ್ ಕೊಡಲು ವಿಳಂಭ ಮಾಡುತ್ತಿರುವುದರ ಬಗ್ಗೆ ಕೆಂಡವಾದ ಲೋಬೊ ಅವರು ಇನ್ನು ವಿಳಂಭ ಮಾಡದೆ ಅವರಿಗೆ ತಕ್ಷಣ ಐಡೆಂಟಿಟಿ ಕಾರ್ಡ್ ಕೊಡುವಂತೆ ತಾಕೀತು ಮಾಡಿದರು.
ಎಲ್ಲಾ ಕಾರ್ಮಿಕರಿಗೆ ಗುರುತಿನ ಚೀಟಿ ಕೊಡುವ ಬಗ್ಗೆ ಕೂಲಂಕಷ ಪರಿಶೀಲನೆ ಮಾಡಿ ನನಗೆ ತಿಳಿಸುವಂತೆ ಸೂಚಿಸಿದ ಅವರು ಈ ಕಾರ್ಡ್ ವಿತರಣೆಯನ್ನು ನಿಗದಿಪಡಿಸುವಂತೆ ಸೂಚಿಸಿದರು. ತಲೆಹೊರೆ ಕಾರ್ಮಿಕರಿಗೆ 9 ಗಂಟೆ ನಂತರ ಒಳಗೆ ಕುಳಿತುಕೊಂಡು ವ್ಯಾಪಾರ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಶಾಸಕರು ಪಾಲಿಕೆ ಅಧಿಕಾರಿಗಳು ಈ ಕ್ರಮವನ್ನು ಪಾಲಿಸುವಂತೆ ತಿಳಿಸಿದರು.
ಕಾರ್ಮಿಕರು ಸ್ವಚ್ಚತೆಯನ್ನು ಕಾಪಾಡುವಂತೆಯೂ ಸಲಹೆ ನೀಡಿದ ಅವರು ಸ್ವಚ್ಚತೆಯನ್ನು ಕಾಪಾಡಿದರೆ ಜನರು ಕೊಳ್ಳಲು ಬರುತ್ತಾರೆ. ಆದರೆ ಈ ವಿಷಯದಲ್ಲಿ ಮೀನಾಮೇಷ ಎಣಿಸಬಾರದು ಎಂದರು. ಕಾರ್ಮಿಕರು ತಮ್ಮ ಅಹವಾಲು ಹೇಳಿಕೊಂಡು ತಾವು ಅನುಭವಿಸುವ ಕಷ್ಟವನ್ನು ಶಾಸಕರ ಗಮನಕ್ಕೆ ತಂದರು. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.