ನಗರದ ಮುಖ್ಯ ರಸ್ತೆಗಳಲ್ಲಿ ವಾಹನಗಳ ಸಂಚಾರ ಅಧಿಕವಾಗಿರುವುದರಿಂದ ಜನರಿಗೆ ಒಂದು ಕಡೆಯಿಂದ ಇನ್ನೊಮದು ಕಡೆಗೆ ತಲುಪಲು ವಿಳಂಬವಾಗುತ್ತದೆ. ಫಳ್ನೀರ್ ರಸ್ತೆಯಲ್ಲಿ ವಾಹನಗಳ ದಟ್ಟನೆ ಜಾಸ್ತಿಯಾಗಿರುತ್ತದೆ. ಆದ್ದರಿಂದ ಇದರ ಬದಿಯಲ್ಲಿರುವ ಕಾಪ್ರಿಗುಡ್ಡದ ಎಸ್ ಎಲ್ ಮಥಾಯಸ್ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಜನರಿಗೆ ಬಹಳಷ್ಟು ಪ್ರಯೋಜನಕಾರಿಯಾಗುತ್ತದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್ ಲೋಬೊರವರು ಇಂದು 02.02.2018ರಂದು ನಗರದ ಕಾಪ್ರಿಗುಡ್ಡದಲ್ಲಿರುವ ಎಸ್ ಎಲ್ ಮಥಾಯಸ್ ರಸ್ತೆಯನ್ನು ಕಾಂಕ್ರಿಟೀಕರಣದ ಕಾಮಗಾರಿಯ ಗುದ್ದಲಿಪೂಜೆಯನ್ನು ನೆರವೇರಿಸಿ ಮಾತನಾಡಿದರು. ಸುಮಾರು ರೂ.4.42 ಕೋಟಿ ವೆಚ್ಚದಲ್ಲಿ ಈ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಿ, ಅದರ ಬದಿಯಲ್ಲಿ ಫೂಟ್ ಬಾತ್ ವ್ಯವಸ್ಥೆಯನ್ನು ಮಾಡಲಾಗುವುದು. ಸುಮಾರು 950 ಮೀಟರ್ ಉದ್ದವಿರುವ ಈ ರಸ್ತೆಯ ಅಗಲ 40ಫೀಟ್ ಆಗಿರುತ್ತದೆ. ರಸ್ತೆಯ ಅಗಲೀಕರಣಕ್ಕೆ ಈ ಭಾಗದ ಜನರು ಬಹಳಷ್ಟು ಸಹಕಾರ ನೀಡಲಿದ್ದಾರೆ. ಪ್ರೀಮಿಯಮ್ ಎಫ್.ಎ.ಆರ್ ನಿಧಿಯಿಂದ ಈ ಕಾಮಗಾರಿಗೆ ಹಣ ಮಂಜೂರಾಗಿದೆ. ನಗರದ ಪ್ರತಿಯೊಂದು ರಸ್ತೆಯ ಅಭಿವೃದ್ಧಿಗೆ ಒತ್ತು ಕೊಡಲಾಗುವುದು. ರಸ್ತೆ ಅಭಿವೃದ್ಧಿಯಾದರೆ ಆ ಪ್ರದೇಶದಲ್ಲಿ ಅನೇಕ ಕಟ್ಟಡಗಳು ನಿರ್ಮಾಣವಾಗುತ್ತದೆ. ಜನರ ವ್ಯಾಪಾರ ವಹಿವಾಟುಗಳು ಜಾಸ್ತಿಯಾಗುತ್ತದೆ. ಮಂಬರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಳೆ ಮಂಗಳೂರು ಬಾಗವಾಗಿರುವ ಬಂದರು, ಕಾರ್ ಸ್ಟ್ರೀಟ್ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಲಾಗುವುದು. ಮೀನುಗಾರಿಕೆ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ಶಾಸಕರು ಹೇಳಿದರು. ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ಹಾಗೂ ಮುಖ್ಯ ಸಚೇತಕ ಶ್ರೀ ಶಶಿದರ ಹೆಗ್ಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲಿಕೆಯ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಾವೂಫ್, ಉಪಮೇಯರ್ ರಜನೀಶ್, ಸಬಿತಾ ಮಿಸ್ಕಿತ್, ಧರ್ಮಣ್ಣ ನಾಯಿಕ, ಪಿ.ಸಿ ಹಾಶೀರ್, ಸುರೇಶ್ ಬಾಬು, ಆಯುಕ್ತ ಮೊಹಮ್ಮದ್ ನಝೀರ್, ರಾಮಚಂದ್ರ ಕರ್ಕೇರ, ಡಾ.ಶ್ರೀಧರ್ ಶೆಟ್ಟಿ. ಟಿ.ಕೆ ಸುಧೀರ್, ಜಮೀಲ್ ಅಂಬರ್, ಪಾಲಿಕೆಯ ಅಧಿಕಾರಿಗಳಾದ ಲಿಂಗೇಗೌಡ, ಗುರುರಾಜ್ ಮರಳಹಳ್ಳಿ, ರಘುಪಾಲ, ಗುತ್ತಿಗೆದಾರ ತಸ್ವೀರುದ್ದೀನ್ ಉಪಸ್ಥಿತರಿದ್ದರು.
Recent News
- ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಭರ್ಜರಿ ಬೆಂಬಲ
- ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆಗೆ ಜನಸಾಗರ
- ಮಂಗಳೂರು ದಕ್ಷಿಣ: ಅಪಾರ ಬೆಂಬಲಿಗರ ಸಾಥ್- ಕಾಂಗ್ರೆಸ್ ಅಭ್ಯರ್ಥಿ ಲೋಬೋ ನಾಮಪತ್ರ ಸಲ್ಲಿಕೆ
- Congress candidate J R Lobo files nomination for Mangaluru South
- Mangaluru South Candidate J R Lobo Files Nomination papers at MCC