ಇತಿಹಾಸ ಪ್ರಸಿದ್ಧ ನಗರದ ಬಿಜೈಯಲ್ಲಿರುವ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ. ಆರ್. ಲೋಬೊರವರು ತಾರೀಕು 02.11.2015ರಂದು ಭೇಟಿ ನೀಡಿದರು. ತೀರಾ ಹಳೆಯದಾದ ಕಟ್ಟಡದ ಕೆಲ ಭಾಗಗಳು ಹಾಗೂ ಇದರ ಆವರಣವು ಯಾವುದೇ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಯಲ್ಲಿ ಕಂಡು ಬಂದಿರುವುದರಿಂದ ಶಾಸಕರು ಖೇದ ವ್ಯಕ್ತಪಡಿಸುತ್ತಾ ಈ ತಿಂಗಳಲ್ಲಿ ಆರಂಭವಾಗುವ ವಿಧಾನಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಸದನದ ಗಮನ ಸೆಳೆದು ಇದರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದು ಈ ಮ್ಯೂಸಿಯಂನ್ನು ಪುನಶ್ಚೇತನಗೊಳಿಸುವುದರ ಜೊತೆಗೆ ಪ್ರಾಚೀನ ವಸ್ತುಗಳನ್ನು ಮತ್ತೆ ಅಳವಡಿಸಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗಿ ಮಾಡಿಕೊಡುವಂತೆ ಸರಕಾರದ ಗಮನ ಸೆಳೆಯುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 1939 ರಲ್ಲಿ ಮಂಗಳೂರಿನ ಬಿಜೈ ಬಟ್ಟಗುಡ್ಡದಲ್ಲಿ ಮುಂಬೈನ ನುರಿತ ಇಂಜಿನಿಯರ್ ಗಳಿಂದ ಹಡಗಿನ ಆಕಾರದಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡವನ್ನು 1955 ರಲ್ಲಿ ಕರ್ನಾಟಕ ಸರಕಾರಕ್ಕೆ ದಾನವಾಗಿ ನೀಡಲಾಗಿದೆ. ಸ್ಥಳೀಯ ದಾನಿಗಳು ಕೊಟ್ಟ ಪ್ರಾಚ್ಯ ವಸ್ತುಗಳು ಇಲಾಖೆಯ ಕ್ಷೇತ್ರ ಕಾರ್ಯದಲ್ಲಿ ಸಂಗ್ರಹಿಸಿದ ಪ್ರಾಚ್ಯ ವಸ್ತುಗಳು ಹಾಗೂ ರಾಜ್ಯದ ಕಲಾವಿದರಿಂದ ರಚಿಸಿದ ಚಿತ್ರ ಕಲೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. 16ನೇ ಶತಮಾನದ ಪಿರಂಗಿಗಳು, ವೀರಭದ್ರ ಯೋಧ, ನಾಗಬ್ರಹ್ಮ, ಮಹಾಸತಿ ಮತ್ತು ವೀರಗಲ್ಲುಗಳು ಮತ್ತು ಕ್ರಿ.ಶ. 1440ರ ಭೂದಾನದ ಶಾಸನಗಳು ಈ ವಸ್ತು ಸಂಗ್ರಹಣದ ಆವರಣದಲ್ಲಿವೆ. 15ನೇ ಶತಮಾನದ ಕಂಚಿನ ಮೂರ್ತಿಗಳು, ಆಯುಧಗಳು, ಮರದ ಪ್ರಾಚ್ಯ ವಸ್ತುಗಳು ಈ ಮ್ಯೂಸಿಯಂ ನಲ್ಲಿವೆ. ಇದನ್ನು ರಕ್ಷಿಸಲು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು. ಮಾಜಿ ಉಪಮೇಯರ್ ಲ್ಯಾನ್ಸಿ ಲಾಟ್ ಪಿಂಟೋ, ಪಾಲಿಕೆ ಆರೋಗ್ಯ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಕಾಂಗ್ರೆಸ್ ಮುಖಂಡರಾದ ಟಿ.ಕೆ. ಸುಧೀರ್, ಸ್ಟಾನಿ ಆಳ್ವರೀಸ್, ಕೃತಿನ್ ಕುಮಾರ್, ಉದಯ ಕುಂದರ್, ಪಾಲಿಕೆಯ ಅಧಿಕಾರಿಗಳಾದ ಲಿಂಗೇಗೌಡ, ಕೃಷ್ಣಾನಂದ, ಪೊಲೀಸ್ ಅಧಿಕಾರಿ ಸುರೇಶ್ ಉಪಸ್ಥಿತರಿದ್ದರು.
Recent News
- ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಭರ್ಜರಿ ಬೆಂಬಲ
- ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆಗೆ ಜನಸಾಗರ
- ಮಂಗಳೂರು ದಕ್ಷಿಣ: ಅಪಾರ ಬೆಂಬಲಿಗರ ಸಾಥ್- ಕಾಂಗ್ರೆಸ್ ಅಭ್ಯರ್ಥಿ ಲೋಬೋ ನಾಮಪತ್ರ ಸಲ್ಲಿಕೆ
- Congress candidate J R Lobo files nomination for Mangaluru South
- Mangaluru South Candidate J R Lobo Files Nomination papers at MCC