ಮಂಗಳೂರು: ಮಂಗಳೂರು ನಗರದಲ್ಲಿ ತಕ್ಷಣಕ್ಕೆ ಕುಡಿಯುವ ನೀರು ಒದಗಿಸಲು 33 ಬೋರ್ ವೆಲ್ ಗಳನ್ನು ಕೊರೆಯಲು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಆದೇಶಿಸಿದರು.
ಅವರು ಇಂದು ಕದ್ರಿಯ ತಮ್ಮ ಕಚೇರಿಯಲ್ಲಿ ನೀರಿನ ಟಾಸ್ಕ್ ಫೊರ್ಸ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತುಂಬೆಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದ್ದು ಪರ್ಯಾಯ ವ್ಯವಸ್ಥೆಯನ್ನು ಮಾಡಲು ತಕ್ಷಣವೇ ಬೋರ್ ವೆಲ್ ಗಳನ್ನು ಕೊರೆಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಈ ಬೋರ್ ವೆಲ್ ಕೊರೆದು ತುಂಬೆಯ ನೀರಿನ ಬದಲು ಈ ನೀರನ್ನು ಲಿಂಕ್ ಮಾಡುವಂತೆ ಹೇಳಿದ ಅವರು ಈ ಕೆಲಸ ಯುದ್ದೋಪಾದಿಯಲ್ಲಿ ಆಗಬೇಕು. ಇನ್ನು ಒಂದು ತಿಂಗಳ ನಂತರ ತುಂಬೆಯಲ್ಲಿ ನೀರು ಇಲ್ಲವೆಂದು ತಿಳಿದು ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಿದರು.
ಈಗ ಇರುವ ಎಲ್ಲಾ ವಾಲ್ ಮ್ಯಾನ್ ಗಳ ಸಭೆ ಕರೆದು ಅವರು ಈಗಿನಿಂದಲೇ ತುಂಬೆಯ ನೀರಿನ ಬದಲು ಕೊಳವೆ ಬಾವಿಗಳನ್ನು ಆಪರೇಟ್ ಮಾಡುವಂತೆ ಸೂಚಿಸಿ ಅವರು ಈ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ತಿಳುವಳಿಕೆ ಕೊಡುವಂತೆ ಹೇಳಿದರು.
ಎಲ್ಲೆಲ್ಲೀ ತೆರೆದ ಬಾವಿಗಳಿವೆಯೋ ಅವುಗಳೋ ನೀರನ್ನು ಬಳಸಿಕೊಳ್ಳಲು ಪ್ರಯತ್ನಿಸಿ. ಕೊಳವೆ ಬಾವಿಯ ನೀರನ್ನು ಎಲ್ಲಿಗೆ ಲಿಂಕ್ ಮಾಡಿದರೆ ಅನುಕೂಲವಾಗುತ್ತದೆ ಎಂಬುದನ್ನು ಮೊದಲು ತಿಳಿದು ಕೊಳ್ಳಿ. ನಂತರ ಕೊಳವೆ ಬಾವಿ, ತೆರೆದ ಬಾವಿಯ ನೀರನ್ನು ಬಳಸಿಕೊಳ್ಳಲು ಪ್ರಯತ್ನಿಸುವಂತೆ ಲೋಬೊ ತಿಳಿಸಿದರು.
ಪ್ರಸ್ತುತ ಮಂಗಳೂರು ನಗರದಲ್ಲಿ 133 ಕೊಳವೆ ಬಾವಿಗಳು ಸಮರ್ಕವಾಗಿದ್ದು 85 ಕೊಳವೆ ಬಾವಿಗಳು ಡೆಡ್ ಆಗಿವೆ. ಸರಿಯಾಗಿರುವ ಕೊಳವೆ ಬಾವಿಗಳ ನೀರನ್ನು ಎಲ್ಲಿಗೆ ಲಿಂಕ್ ಮಾಡ ಬಹುದು, ಹಾಗೆ ಮಾಡಿದರೆ ಎಷ್ಟು ಜನರಿಗೆ ನೀರು ಕೊಡಲು ಸಾಧ್ಯವಿದೆ ಎಂಬ ಬಗ್ಗೆ ಕೂಲಂಕಷ ಅಧ್ಯಯನ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಪ್ರಸ್ತುತ ತುಂಬೆಯಲ್ಲಿ 4.3 ನೀರಿದ್ದು ಈಗಿನಿಂದಲೇ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಹಲೆ ಮಾಡಿದ ಅವರು ಮಂಗಳೂರು ನಗರದ ನಾಗರೀಕರು ತುಂಬೆಯಲ್ಲಿ ನೀರಿಲ್ಲ ಎನ್ನುವುದನ್ನು ಮರೆತು ಪರ್ಯಾಯ ಕ್ರಮಗಳಿಗೆ ಒಗ್ಗಿಕೊಳ್ಳುವಂತೆ ಶಾಸಕ ಲೋಬೊ ತಿಳಿಸಿ ಶನಿವಾರದ ಒಳಗೆ ಇಂಜಿನಿಯರ್ ಗಳು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ಮುಂದಿನ ಟಾಸ್ಕ್ ಫೋರ್ಸ್ ಸಭೆಗೆ ಬರುವಂತೆ ಸೂಚಿಸಿದರು.