ಮಂಗಳೂರು-ಕುವೈಟ್ ಪುನರಾರಂಭಗೊಂಡ ವಿಮಾನಯಾನವು ಅ. 27 ರಂದು ತನ್ನ ಮರು ಪ್ರಯಾಣವನ್ನು ಬೆಳಿಗ್ಗೆ 7.30 ರ ಮೊದಲ ಯಾನದಲ್ಲಿ ಆರಂಭಿಸಿತು. ಈ ಮರು ಪ್ರಯಾಣದ ಹಿಂದೆ ಮಂಗಳೂರು ದಕ್ಷಿಣ ವಿಧಾನ ಸಭಾ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಕೆಲವು ತಿಂಗಳ ಹಿಂದೆಯೇ ಕರ್ನಾಟಕ ಸರಕಾರದ ವಕ್ಫ್ ಹಾಗೂ ಮೂಲಸೌಕರ್ಯ ಸಚಿವರಾದ ಶ್ರೀ ರೋಶನ್ ಬೇಗ್‍ರೊಡನೆ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಜಿ.ಎಮ್ ಸಿದ್ದೇಶ್ವರರನ್ನು ಬೇಟಿಯಾಗಿ ಮಂಗಳೂರು-ಕುವೈಟ್ ಯಾನವನ್ನು ಪುನರಾರಂಬಿಸುವಂತೆ ಸಚಿವರಿಗೆ ಮನವಿ ಮಾಡಿದ್ದರು ಅವರ ಮನವಿಗೆ ಸ್ಪಂದಿಸಿದ ಸಚಿವರು ಅಕ್ಟೋಬರದಿಂದ ಆರಂಭಿಸುವಂತೆ ಆಶ್ವಾಸನೆ ನೀಡಿದ್ದರು.

ಅದರಂತೆ ಇಂದು ಮೊದಲ ವಿಮಾನಯಾನದಲ್ಲಿ ಪ್ರಯಾಣಿಸಿದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಸುದ್ದಿಗಾರರೊಂದಿಗೆ ಮಾತನಾಡಿ ಮಂಗಳೂರು- ಕುವೈಟ್ ವಿಮಾನ ಸೇವೆಯು ಕೊನೆಗೊಂಡು ಇಂದಿಗೆ ಒಂದು ವರ್ಷ ಕಳೆದಿದೆ, 8 ತಿಂಗಳ ಹಿಂದೆ ಈ ವಿಷಯವನ್ನು ನಾವು ವಿಧಾನಸಭೆಯಲ್ಲಿ ಚರ್ಚಿಸಿ ನಮ್ಮ ರಾಜ್ಯ ಸರಕಾರವು ಈ ವಿಷಯವನ್ನು ಕೇಂದ್ರ ಸರಕಾರದೊಡನೆ ಚರ್ಚಿಸಿದಾಗ ನಮಗೆ ಸಿಕ್ಕಿದ ಉತ್ತರವೆಂದರೆ ಮಂಗಳೂರು ನಗರವು ಹಣಕಾಸು ವ್ಯವಹಾರದಲ್ಲಿ ತೀರಾ ಹಿಂದುಳಿದಿದೆ ಆದ್ದರಿಂದ ಈ ಮಂಗಳೂರು- ಕುವೈಟ್ ವಿಮಾನಯಾನ ಸಾದ್ಯವಿಲ್ಲವೆಂಬ ಉತ್ತರ ದೊರಕಿತು. ಮತ್ತೆ ನಾವು ಕಳೆದ ಜುಲೈ ತಿಂಗಳಲ್ಲಿ ಏರ್ ಇಂಡಿಯಾದ ನಿರ್ದೇಶಕರನ್ನು ಮತ್ತು ಆಡಳಿತ ನಿರ್ದೇಶಕರನ್ನು ಬೇಟಿಯಾಗಿ ನಮ್ಮ ಸಮಸ್ಯೆಗಳನ್ನು ವಿವರಿಸಿದ ನಂತರ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ಜಿ.ಎಮ್ ಸಿದ್ದೇಶ್ವರರನ್ನು ಬೇಟಿ ಮಾಡಿ ವಿಮಾನಯನವನ್ನು ಪುನರಾರಂಬಿಸುವಂತೆ ಒತ್ತಡ ಹೇರಲಾಯಿತು ಅದರ ಪಲಿತಾಂಶವೇ ಇಂದಿನ ಈ ಸುದಿನ ನಮಗೆ ದೊರೆತಿದೆ, ಇದಕ್ಕಾಗಿ ಶಾಸಕ ಲೋಬೊರವರು ಸಚಿವರಾದ ಶ್ರೀ ರೋಶನ್ ಬೇಗ್ ಮತ್ತು ಏರ್ ಇಂಡಿಯಾದ ನಿರ್ದೇಶಕರು ಮತ್ತು ಆಡಳಿತ ನಿರ್ದೇಶಕರನ್ನು ಮತ್ತು ಸಚಿವರನ್ನು ಅಬಿನಂದಿಸಿದರು.
ಈ ಸಂದರ್ಭದಲ್ಲಿ ಮಾಜೀ ಶಾಸಕರಾದ ಶ್ರೀ ವಿಜಯ ಕುಮಾರ್ ಶೆಟ್ಟಿ, ಸುರೇಶ್ ಬಳ್ಳಾಲ್, ಉಪಮೇಯರ್ ಕವಿತಾ ವಾಸು, ವಿಶ್ವಾಸ್ ದಾಸ್, ಟಿ.ಕೆ ಸುದೀರ್, ಡೆನಿಸ್ ಡಿ’ಸಿಲ್ವ, ಕ್ರತಿನ್ ಕುಮಾರ್, ರಮಾನಂದ ಪೂಜಾರಿ, ಮೋಹನ್ ಮೆಂಡನ್, ಮೊಹಮ್ಮದ್ ಅರೀಪ್, ಗುರುಪ್ರಸಾದ್ ಬೊಳಾರ್ ಸಂದಿಪ್ ಕುಮಾರ್ ಉಪಸ್ಥಿತರಿದ್ದರು.

Air_INDIA_FLIGHT_RESUME_03Air_INDIA_FLIGHT_RESUME_04Air_INDIA_FLIGHT_RESUME_05Air_INDIA_FLIGHT_RESUME_02