ಮಂಗಳೂರು: ನಗರದ ಶಾಸಕರಾದ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ಸುಮಾರು 100 ಶಾಲಾ ಮುಖ್ಯೋಪಾಧ್ಯಯರೊಂದಿಗೆ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಯವರ ಸಮ್ಮಖದಲ್ಲಿ 2014-15 ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಪರಿಶೀಲಿಸಿದರು.
ಕಳೆದ ಸಾಲಿನ ಅಂಕಿ ಅಂಶಗಳ ಪ್ರಕಾರ ಸರಕಾರಿ ಶಾಲೆಗಳಿಗೆ 81%, ಅನುದಾನಿತ ಶಾಲೆಗಳಿಗೆ 86% ಹಾಗು ಅನುದಾನ ರಹಿತ ಶಾಲೆಗಳಿಗೆ 91 ಶೇಕಡಾ ಫಲಿತಾಂಶವು ಲಬಿಸಿತ್ತು.
ಬಳಿಕ ಮಾತನಾಡಿದ ಶಾಸಕರು ದಕ್ಷಿಣ ಕನ್ನಡ ಹಾಗು ಉಡುಪಿ ಶಿಕ್ಷಣಕ್ಕೆ ಹೆಸರುವಾಸಿಯದ ಜಿಲ್ಲೆಗಳು. ರಾಜ್ಯದಲ್ಲಿ 29ನೇ ಸ್ಥಾನದಿಂದ ಕಳೆದ ಬಾರಿ 8ನೇ ಸ್ಥಾನಕ್ಕೆ ಬಂದು, ಜಿಲ್ಲೆಗೆ ವರ್ಚಸ್ಸು ತರಲು ಶ್ರಮ ಪಟ್ಟ ಶಿಕ್ಷಕರನ್ನು ಅಭಿನಂದಿಸಿದರು. ಪಿ.ಯು.ಸಿ ಪರೀಕ್ಷೆಯಲ್ಲಿ ಒಳ್ಳಯ ಫಲಿತಾಂಶ ಜಿಲ್ಲೆಗೆ ಲಭಿಸಿದ್ದು, ಎಸ್.ಎಸ್.ಎಲ್.ಸಿಯಲ್ಲಿಯು ಮುಂದೆ ಬರಲು ಎಲ್ಲಾ ಪೂರ್ಣ ಸಿದ್ದತೆಯನ್ನು ಮಾಡಬೇಕಾಗಿದೆ. ಕಳೆದ ಸಾಲಿನಲ್ಲಿ ಶೇಕಡ 88% ಮಕ್ಕಳು ಉತ್ತಿರ್ಣ ರಾಗಿದ್ದು, ಪ್ರಸ್ತುತ ಸಾಲಿನಲ್ಲಿ ಫಲಿತಾಂಶವನ್ನು ಕನಿಷ್ಠ 95%ಕ್ಕೆ ಬರಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು ಹಾಗು ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚಿನ ಓತ್ತು ನೀಡಲು ಶಿP್ಪ್ಷಕರಿಗೆ ತಿಳಿ ಹೇಳಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಉಪಸ್ಥಿತರಿದ್ದರು.