ಮಂಗಳೂರು ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣ ಗೊಳಿಸಲು ಈಗಾಗಲೇ ಕ್ರಮ ಕೈಗೊಂಡಿದೆ. ಆಡಳಿತ ವ್ಯವಸ್ಥೆಯು ಕಂಪ್ಯೂಟರೀಕರಣ ಗೊಂಡಾಗ ಪಾಲಿಕೆಯ ಆದಾಯವು ವೃದ್ಧಿಯಾಗುತ್ತದೆ. ಹಲವಾರು ವರುಷಗಳಿಂದ ಪಾಲಿಕೆಗೆ ಬರಬೇಕಾಗಿರುವ ತೆರಿಗೆಯ ಹಣವನ್ನು ವಸೂಲು ಮಾಡಲು ಈ ಪದ್ದತಿಯು ಅನುಕೂಲಕರವಾಗುತ್ತದೆ. ಪಾಲಿಕೆಯ ಆರ್ಥಿಕ ವ್ಯವಸ್ಥೆಯು ಅಷ್ಟೇನೂ ಉತ್ತಮವಲ್ಲದಿದ್ದರೂ ಈ ಪದ್ಧತಿಯಿಂದ ಅದು ವೃದ್ಧಿಯಾಗುವ ನಿರೀಕ್ಷೆಯಿದ್ದು, ನಗರದ ಮೂಲಭೂತ ಸೌಕರ್ಯದ ಕಾಮಗಾರಿ ನಡೆಸಲು ಅನುಕೂಲವಾಗುತ್ತದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ. ಆರ್. ಲೋಬೊರವರು ತಾರೀಕು 01.11.2015ರಂದು 49ನೇ ಕಂಕನಾಡಿ ವಾರ್ಡ್ನಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಶಾಸಕರ ನಿಧಿಯಿಂದ 14.00 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೇಯರ್ ಶ್ರೀಮತಿ ಜೆಸಿಂತಾ ವಿಜಯ ಆಲ್ಪ್ರೆಡ್, ಪಾಲಿಕೆಯ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾಮಗಾರಿ ಸ್ಥಾಯಿ ಸಮಿತಿಯ ಅಧ್ಯಕ್ಷ ದೀಪಕ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಕೆ. ಸುಧೀರ್, ವಾರ್ಡು ಅಧ್ಯಕ್ಷ ಭರತ್ ರಾಮ್ ಸ್ಥಳೀಯರಾದ ಈಶ್ವರ್ ಭಟ್, ಕೃತಿಕ್ ಕುಮಾರ್, ಶಶಿಧರ್ ಕೊಟ್ಟಾರಿ, ಸಂತೋಷ್, ಸುಧಾಕರ್, ದೀಕ್ಷಿತ್, ಸಂದೀಪ್, ಮುರಳಿ, ನಾಗೇಂದ್ರ, ಸುನಿಲ್ ದೇವಾಡಿಗ, ಲ್ಯಾನ್ಸಿ, ಚೇತನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Recent News
- ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಭರ್ಜರಿ ಬೆಂಬಲ
- ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆಗೆ ಜನಸಾಗರ
- ಮಂಗಳೂರು ದಕ್ಷಿಣ: ಅಪಾರ ಬೆಂಬಲಿಗರ ಸಾಥ್- ಕಾಂಗ್ರೆಸ್ ಅಭ್ಯರ್ಥಿ ಲೋಬೋ ನಾಮಪತ್ರ ಸಲ್ಲಿಕೆ
- Congress candidate J R Lobo files nomination for Mangaluru South
- Mangaluru South Candidate J R Lobo Files Nomination papers at MCC