ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಜೆಪ್ಪಿನಮೊಗರು ಆದಂ ಕುದ್ರು ಪ್ರದೇಶಕ್ಕೆ ಹೊಸ ಕುಡಿಯುವ ನಳ್ಳಿ ನೀರಿನ ಯೋಜನೆಯನ್ನು ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಉದ್ಘಾಟಿಸಿದರು. ಮಾನ್ಯ ಶಾಸಕರು ಸುಮಾರು ಒಂದೂವರೆ ವರ್ಷದ ಹಿಂದೆ ಆದಂ ಕುದ್ರು ಪರಿಸರಕ್ಕೆ ಬೇಟಿ ನೀಡಿದಾಗ ಸ್ಥಳೀಯ ಜನರು ತಾವು ನದೀ ತೀರದಲ್ಲಿ ವಾಸಿಸುತ್ತಿದ್ದು ನಮಗೆ ಸಮರ್ಪಕವಾದ ನೀರಿನ ವ್ಯವಸ್ಥೆ ಇಲ್ಲ ನಾವು ಉಪ್ಪು ನೀರು ಕುಡಿದು ಬದುಕುವಂತ ಪರಿಸ್ಥಿತಿ ಇದೆ ಎಂದು ತಮ್ಮ ಪರಿಸರದ ವಸ್ತುಸ್ಥಿತಿಂiÀi ಬಗ್ಗೆ ಶಾಸಕರಿಗೆ ಮನದಟ್ಟು ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು ಈ ಜಾಗದ ಜನರಿಗೆ ಮಂಗಳೂರು ಮಹಾ ನಗರ ಪಾಲಿಕೆಯ ವತಿಯಿಂದ ಶುದ್ಧ ಕುಡಿಯುವ ನೀರಿನ ಆಶ್ವಾಸನೆ ನೀಡಿದ್ದರು. ಈಗ ನುಡಿದಂತೆ ನಡೆದ ಶಾಸಕರು ಸುಮಾರು 30 ವರ್ಷಗಳ ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ. ಈ ಸಂದರ್ಭದಲ್ಲಿ ಮತನಾಡಿದ ಶಾಸಕ ಶ್ರೀ ಜೆ. ಆರ್ ಲೋಬೊರವರು ರಾಜ್ಯ ಸರಕಾರವು ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ನೀಡಲು ಮುಂದೆ ಬಂದಿದೆ ಇದಕ್ಕೋಸ್ಕರ ಟಾಸ್ಕ್ ಕಮಿಟಿಯನ್ನು ರಚಿಸಲು ಮುಂದಾಗಿದೆ. ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯಿಂದ ನೀರಿನ ಸಮಸ್ಯೆ ಬಂದಾಗ ಅದನ್ನು ಸರಿಪಡಿಸಲು ವಿಶೇಷವಾದ ಗಮನ ಹರಿಸಲು ಸರಕಾರ ಮುಂದಾಗಿದೆ ಎಂದರು. ಮೇಯರ್ ಮಹಾಬಲ ಮಾರ್ಲಾರವರು ಪಾಲಿಕೆಯ ಮೂಲಭಾಗವಾಗಿರುವ ಈ ಪ್ರದೇಶಕ್ಕೆ ಕುಡಿಯುವ ನೀರಿನ ಅಗತ್ಯತೆ ತೀರಾ ಅವಶ್ಯಕವೆನಿಸಿದೆ ಆದ್ದರಿಂದ ಈ ಪ್ರದೇಶಕ್ಕೆ ಹೆಚ್ಚಿನ ಒತ್ತು ಕೊಟ್ಟು ಈ ಕಾರ್ಯವನ್ನು ಪೂರ್ತಿಗೊಳಿಸಲಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಈ ಸಂಧರ್ಭದಲ್ಲಿ ಸ್ಥಳೀಯ ಇಗರ್ಜಿಯ ಧರ್ಮಗುರುಗಳಾದ ಫಾ ಅನಿಲ್ ರೂಪೇಶ್ ಮಾಡ್ತಾ, ಉಪಮೇಯರ್ ಕವಿತಾ, ಸ್ಥಾಯಿ ಸಮೀತಿ ಅಧ್ಯಕ್ಷ ಅಶೋಕ್ ಕುಮಾರ್ ಡಿ.ಕೆ, ಕಾಪೆರ್Çೀರೆಟರ್ಗಳಾದ ಜಿ.ಸುರೇಂದ್ರ, ಪ್ರವೀಣ್ ಆಳ್ವ, ಉಮೇಶ್ಚಂದ್ರ, ಟಿ.ಕೆ ಸುಧೀರ್, ವಾಲ್ಟರ್ ಲೋಬೊ, ಹರ್ಬಟ್ ಡಿ’ಸೋಜ, ಡೆಮ್ಮಿ ಡಿ’ಸೋಜ, ರಮಾನಂದ ಪೂಜಾರಿ, ಡೆನ್ನಿಸ್ ಡಿಸಿಲ್ವ, ಕ್ರತಿನ್ ಕುಮಾರ್ ಗಿಲ್ಬರ್ಟ್ ಡಿ’ಸೋಜ, ಜಾನ್ ತಾವ್ರೊ, ಅಶೋಕ್ ಕುಡುಪಾಡಿ ಮೊದಲಾದವರು ಉಪಸ್ಥಿತರಿದ್ದರು.
Recent News
- ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಭರ್ಜರಿ ಬೆಂಬಲ
- ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆಗೆ ಜನಸಾಗರ
- ಮಂಗಳೂರು ದಕ್ಷಿಣ: ಅಪಾರ ಬೆಂಬಲಿಗರ ಸಾಥ್- ಕಾಂಗ್ರೆಸ್ ಅಭ್ಯರ್ಥಿ ಲೋಬೋ ನಾಮಪತ್ರ ಸಲ್ಲಿಕೆ
- Congress candidate J R Lobo files nomination for Mangaluru South
- Mangaluru South Candidate J R Lobo Files Nomination papers at MCC