ನಗರದ ಪ್ರಮುಖ ರಸ್ತೆಗಳೊಂದಾದ ಕಂಕನಾಡಿ ಹಳೆ ಪೆÇೀಸ್ಟ್ ಆಫೀಸ್ ರಸ್ತೆಯ ಅಭಿವೃದ್ಧಿ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಈ ರಸ್ತೆಯಲ್ಲಿ ಒಳ ಚರಂಡಿಯ ಕೊರತೆ ಇತ್ತು. ಅದರ ಕೆಲಸ ಈಗ ಭರದಿಂದ ಸಾಗುತ್ತಿದೆ. ಕಾಮಗಾರಿಯನ್ನು ಪರಿಶೀಲಿಸಲು ತಾ 13-01-2018 ರಂದು ಆಗಮಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೋರವರು, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ರಸ್ತೆಗೆ ಈಗ ಕಾಯಕಲ್ಪ ಆಗಿದೆ. ಸಾರ್ವಜನಿಕರ ನಿರೀಕ್ಷೆಯಂತೆ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿಯವರ ಅನುದಾನದ ನಿಧಿಯಿಂದ ರೂ 2.70 ಕೋಟಿ ಹಣ ರಸ್ತೆ ಕಾಂಕ್ರೀಟಿಕರಣಕ್ಕೆ ಹಾಗೂ ರೂ. 70 ಲಕ್ಷ ಹಣ ಒಳಚರಂಡಿಯ ಕಾಮಗಾರಿಗೆ ಮಂಜೂರಾಗಿದೆ.
ಒಳಚರಂಡಿಯ ಕಾಮಗಾರಿ ಮುಗಿದೊಡನೆ ರಸ್ತೆ ಕಾಂಕ್ರೀಟಿಕರಣದ ಕಾಮಗಾರಿಯನ್ನು ಆರಂಭಿಸಲಿದ್ದೇವೆ. ಸುಮಾರು 700 ಮೀಟರ್ ಉದ್ದವಿರುವ ಈ ರಸ್ತೆಗೆ ಮತ್ತು 6 ಮೀಟರ್ ಅಗಲಕ್ಕೆ ಕಾಂಕ್ರೀಟಿಕರಣ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿಗೆ ಕೊಂಡಿಯಾಗಿರುವ ಈ ರಸ್ತೆಯು ಪೂರ್ಣಗೊಂಡರೆ ಪಂಪ್ವೆಲ್ ಮುಖ್ಯ ರಸ್ತೆಯ ದಟ್ಟನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ತಿಗೊಳಿಸಿ ಸಾರ್ವಜನಿಕರಿಗೆ ಮುಕ್ತ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಕಾಪೆರ್Çೀರೇಟರ್ ಆಶಾ ಡಿ’ಸಿಲ್ವಾ. ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧೀರ್, ವೆಲೆನ್ಸಿಯಾ ವಾರ್ಡ್ ಅಧ್ಯಕ್ಷ ಹೇಮಂತ್ ಗರೋಡಿ, ಕೃತಿನ್ ಕುಮಾರ್, ಮಾಜೀ ಕಾಪೆರ್Çೀರೇಟರ್ ಅಝೀಜ್, ಪಾಲಿಕೆಯ ಉಪ ಆಯುಕ್ತ ಲಿಂಗೇಗೌಡ, ಅಭಿಯಂತರ ಗಣಪತಿ, ಗುತ್ತಿಗೆದಾರ ಎಂ.ಜಿ. ಹುಸೈನ್ ಉಪಸ್ಥಿತರಿದ್ದರು.