ಜೆಪ್ಪು ಕುಡುಪಾಡಿಯಲ್ಲಿರುವ ಶ್ರೀ ವಿಷ್ಣು ಮೂರ್ತಿ ಆದಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಕರ್ನಾಟಕ ಸರಕಾರದ ವತಿಯಿಂದ ಮಂಜೂರಾದ ರೂ. 3.00 ಲಕ್ಷ ಅನುದಾನದ ಚೆಕ್ಕನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೊ ರವರು ತಮ್ಮ ಕಛೇರಿಯಲ್ಲಿ ಕ್ಷೇತ್ರದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ಶೈಲಜಾ, ಸಮಿತಿಯ ಅಧ್ಯಕ್ಷ ಶ್ರೀ ಚೆರಿಯಂಡ ಬೆಳ್ಚಪ್ಪಾಡ, ಬಾಲ ಬೆಳ್ಚಪ್ಪಾಡ, ದಾಮೋದರ ಗುರಿಕಾರ, ಸುಧೀರ್ ಜೆಪ್ಪು, ಸುರೇಶ್ ಕುತ್ತಾರ್, ಸುನಿಲ್ ಕುಲಶೇಖರ, ಅಜಿತ್ ಕೊಟ್ಟಾರ, ಜಗದೀಶ್ ಕುಡುಪಾಡಿ, ಬಾಬು ಕುತ್ತಾರ್, ಕುಮಾರನ್ ಜೆಪ್ಪು ಹಾಗೂ ಕಾಂಗ್ರೆಸ್ ಮುಖಂಡರಾದ ಟಿ.ಕೆ. ಸುಧೀರ್ ಅಶೋಕ್ ಕುಡುಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಜೆಪ್ಪು ಕುಡುಪಾಡಿ ಶ್ರೀ ವಿಷ್ಣು ಮೂರ್ತಿ ಆದಿ ಕ್ಷೇತ್ರದ ಜೀರ್ಣೋದ್ಧಾರಕ್ಕೆ ರೂ. 3.00 ಲಕ್ಷ ಬಿಡುಗಡೆ
by JR Lobo | Apr 1, 2016 | News from jrlobo's Office
