ಮಂಗಳೂರು: ಧಾರ್ಮಿಕ ಸ್ಥಳಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರಗಳು. ಈ ಆರಾಧನಾ ಕೇಂದ್ರಗಳ ಅಭಿವೃದ್ಧಿಗಾಗಿ ಸರ್ಕಾರ ಅನುದಾನವನ್ನು ಒದಗಿಸುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಕಸಬಾ ಬೆಂಗ್ರೆಯಲ್ಲಿ ಅಲ್ ಮದ್ರಸತುಲ್ ದೀನಿಯಾ ಶಾಲೆ ಮತ್ತು ಮದ್ರಸ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಈ ಪ್ರದೇಶ ಅಭಿವೃದ್ಧಿಗೆ ಶಾಸಕನಾಗಿ ತಾವು ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿ ನಾವೆಲ್ಲರೂ ಎಲ್ಲಾ ಧರ್ಮವನ್ನು ಪ್ರೀತಿಸುವ ಮೂಲಕ ಒಂದು ಸುಂದರ ಸಮಾಜವನ್ನು ನಿರ್ಮಾಣ ಮಾಡಲು ಬದ್ಧರಾಗಿ ಕೆಲಸ ಮಾಡೋಣ ಎಂದರು.
ಖಾಜಿಗಳಾದ ಶೈಖುನಾತ್ವಾಕಾ ಉಸ್ತಾದ್ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಅಧ್ಯಕ್ಷತೆಯನ್ನು ಮಹಮ್ಮದ್ ಅಸ್ಲಾಮ್ ವಹಿಸಿದ್ದರು. ಅಬ್ದುಲ್ ರೆಹಮಾನ್ ಬಾಂಬಿಲ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಪೊರೇಟರ್ ಮೀರಾ ಕರ್ಕೇರ,ಚೇತನ ಬೆಂಗ್ರೆ, ಶೇಖರ್ ಸುವರ್ಣ, ಮೊಯ್ದಿನ್ ಬಿಲಾಲ್, ಅಶಿಪ್ ಅಹ್ಮದ್ ಹಮೀದ್ ಹುಸೈನ್, ಸಿ.ಪಿ.ಮುಸ್ತಾಪಾ, ಸುಲೈಮಾನ್, ಫಾರೂಕ್ ಹನೀಫ್, ನಾಸಿರ್ ಕೌಶಲ್, ಎಸ್.ಪಿ. ಅಬೂಬಕ್ಕರ್, ಹಾಜಿ ಮುಸ್ಲಿಯಾರ್, ಇಬ್ಬಿ ಕುಂಜಿಹಾಜಿ ಅವರು ಅತಿಥಿಗಳಾಗಿದ್ದರು. ಪ್ರಾರಂಭದಲ್ಲಿ ಮಹಮ್ಮದ್ ರಫಿಕ್ ಸ್ವಾಗತಿಸಿದರು.