ಬೆಳ್ತಂಗಡಿ ಕೊಕ್ಕಡದಲ್ಲಿ ಚುನಾವಣಾ ಪ್ರಚಾರ ಸಭೆ – ನಮ್ಮದು ನೈಜ ಹಿಂದೂತ್ವಃ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ
ಬೆಳ್ತಂಗಡಿಃ ಎಲ್ಲ ಜಾತಿ ಧರ್ಮದವರನ್ನು ಗೌರವಿಸುವ ನಮ್ಮದು ನೈಜ ಹಿಂದೂತ್ವ ಎಂದು ಕಾಂಗ್ರೆಸ್ ಪಕ್ಷ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.
ಬೆಳ್ತಂಗಡಿ ವಿಧಾನಸಭಾ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಯಾದ ಮಿಥುನ್ ರೈ ಅವರು ಇಂದು ಕೊಕ್ಕಡದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೆಶಿಸಿ ಮಾತನಾಡಿದರು.
ತನ್ನ ರಾಜಕೀಯ ಸಿದ್ದಾಂತ ತುಂಬಾ ಸ್ಪಷ್ಟವಾಗಿದೆ. ಎಲ್ಲರಿಗೂ ಸಮಪಾಲು ಸಹಬಾಳ್ವೆ ಎಂಬ ಸಿದ್ಧಾಂತದೊಂದಿಗೆ ಎಲ್ಲ ಜಾತಿ ಧರ್ಮದವರನ್ನು ಗೌರವಿಸುದೇ ನಿಜವಾದ ಹಿಂದೂ ಧರ್ಮ ಹೊರತು ಧರ್ಮಗಳ ನಡುವೆ ವೈಷಮ್ಯ ಬೆಳೆಸಿ ರಾಜಕೀಯ ನಡೆಸುವುದಲ್ಲ ಎಂದು ಮಿಥುನ್ ರೈ ಹೇಳಿದರು.
ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ವ್ಯಕ್ತಿ ರಾಜಕೀಯ ಕಾರಣಕ್ಕಾಗಿ ಸಾಯಬಾರದು. ಏಕೆಂದರೆ, ಜೀವ ನೀಡುವ ಬಹುತೇಕರು ಅಮಾಯಕರ ಕಾರ್ಯಕರ್ತರಾಗಿರುತ್ತಾರೆ.ಪರಿಸ್ಥಿತಿಯ ದುರ್ಲಾಭ ಪಡೆಯುವ ಮುಖಂಡರು ಆಗಿರುತ್ತಾರೆ. ಆದುದರಿಂದ ದ್ವೇಷ ವೈಷ್ಯಮ್ಯದ ರಾಜಕೀಯ ನಮೆಗ ಬೇಡ ಎಂದವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ವ್ಯಾಪಕ ಅವಕಾಶವಿದೆ. ನಮ್ಮದು ವಿದ್ಯಾವಂತರ ಜಿಲ್ಲೆ. ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಪಡೆದ ಯುವಜನಾಂಗ ಇಲ್ಲಿದೆ. ಅವರಿಗೆ ಸೂಕ್ತ ಉದ್ಯೋಗದ ಅವಕಾಶ ಆಗಬೇಕು ಎಂಬುದು ತನ್ನ ಬಯಕೆ ಎಂದು ಮಿಥುನ್ ರೈ ಹೇಳಿದರು.
ಸಾರ್ವಜನಿಕ ಸಭೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿಯಾದ ಮಿಥುನ್ ರೈ ಅವರು ಸೌತಡ್ಕದ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ದೇವರ ಆಶಿರ್ವಾದವನ್ನು ಪಡೆದರು.
ಮಿಥುನ್ ರೈ ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಸಕ ಹರೀಶ್ ಕುಮಾರ್, ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಶಾಸಕ ವಸಂತ ಬಂಗೇರ ಮತ್ತಿತರ ಸ್ತಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.