ಪಕ್ಷದಲ್ಲಿ ಕಾರ್ಯಕರ್ತರ ಸಂಘಟಣೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಿದರೆ ಪಕ್ಷ ಅಧಿಕಾರ ಬರಲು ಸಾಧ್ಯ ಎಂದು ಕಾರ್ನಾಟಕ ಸರಕಾರದ ವಿಜ್ಞಾನ ಹಾಗೂ ಮಹಿತಿ ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ರವರು ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. ಮುಂದೆ ನಡೆಲಿರುವ ನಿಗಮ, ಮಂಡಳಿಗೆ ನೇಮಕಾತಿ ನಡೆಯುವ ಸಂಧರ್ಭದಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ರಾಜ್ಯದಲ್ಲಿರುವ ಮಾಹಿತಿ ತಂತ್ರಜ್ಞಾನ ಕಛೇರಿಗಳಲ್ಲಿ ಸ್ಥಳಿಯರಿಗೆ ಉದ್ಯೋಗವಕಾಶ ನೀಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯಿಂದ ಎಷ್ಟು ಕನ್ನಡಿಗರಿಗೆ ಉದ್ಯೋಗ ಅವಕಾಶ ಲಭಿಸಿದೆ ಎಂದು ಸರ್ವೆ ಕಾರ್ಯ ನಡೆಯಬೇಕು ಎಂದರು. ಐಟಿ ಕ್ಷೇತ್ರ, ಸಿಲಿಕಾನ್ ಕ್ಷೇತ್ರ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿಯೇ ಉತ್ತಮ ಸ್ಥಾನದಲ್ಲಿದ್ದು, ಇದೊಂದು ರೋಲ್ ಮೋಡಲ್ ಸ್ಟೇಟ್ ಆಗಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಇಬ್ರಾಹಿಂ ಕೊಡಿಚ್ಚಾಲ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಮೊೈದಿನ್ ಬಾವ, ಐವನ್ ಡಿಸೋಜ, ಪಕ್ಷದ ಪದಾದಿಕಾರಿಗಳಾದ ಸದಾಶಿವ ಉಳ್ಳಾಲ್,ಮೊಹಮ್ಮದ್ ಬದ್ರುದ್ದೀನ್, ಮಿಥುನ್ ರೈ, ಟಿ.ಕೆ.ಸುಧೀರ್, ಸುರೇಶ್ ಬಲ್ಲಾಳ್, ನಾಗೇಂದ್ರ ಕುಮರ್, ವಿಶ್ವಾಸ್ ದಾಸ್, ಹಿಲ್ಡ ಆಳ್ವ, ಬಾಲಕೃಷ್ಣ ಶೆಟ್ಟಿ, ನಜೀರ್ ಬಜಾಲ್, ಪ್ರಕಾಶ ಅಳಪೆ, ಕೇಶವ ಮರೋಳಿ, ರಮಾನಂದ ಪೂಜಾರಿ, ಮನುರಾಜ್, ಮೋಹನ್ ಮೆಂಡನ್, ಜಯಕರ ಸಮರ್ಥ, ಮೊಹಮ್ಮದ್ ಅರೀಫ್, ಕೃತಿನ್ ಕುಮಾರ್, ಉದಯ್ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.