ಮಂಗಳೂರು: ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಶಕ್ತಿನಗರ 35 ನೇ ಪದವು ಸೆಂಟ್ರಲ್ ವಾರ್ಡಿನ ರಾಜೀವ್ ನಗರ ಪ್ರದೇಶದ ಜನಸಂಪರ್ಕ ಸಭೆಯನ್ನು ಉದ್ದೇಶಿ ಮಾತನಾಡುತ್ತಿದ್ದರು.
ರಾಜೀವ್ ನಗರ ಪ್ರದೇಶದಲ್ಲಿ ಹಕ್ಕುಪತ್ರ, ಕುಡಿಯುವ ನೀರು ಸಮಸ್ಯೆ ಸಹಿತ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿವಾರಿಸಲು ಜನರು ನೀಡಿದ ಮನವಿಪತ್ರ ಸ್ವೀಕರಿಸಿದ ಶಾಸಕರು ತಾನು ಮಂಗಳೂರು ಮಹಾನಗರಪಾಲಿಕೆಯಲ್ಲಿ ಕಮಿಷನರ್ ಆಗಿದ್ದಾಗ 2003 ರಲ್ಲಿ ಬಡವರಿಗೆ, ನಿರ್ಗತಿಕರಿಗೆ ಮೂರುವರೆ ಸೆಂಟ್ಸ್ ಸ್ಥಳ ನೀಡಿದ್ದುದನ್ನು ಪ್ರಸ್ತಾಪಿಸಿ ಈ ಪ್ರದೇಶ ಮುಂದಿನ ದಿನಗಳಲ್ಲಿ ಬಹಳಷ್ಟು ಬೆಳೆಯಲಿದೆ ಎಂದರು.
ರಾಜೀವ್ ನಗರ ಪ್ರದೇಶದಲ್ಲಿ ಸಧ್ಯದಲ್ಲೇ 1100 ಮನೆಗಳು ಬರಲಿದ್ದು ಇಲ್ಲಿ ಮಕ್ಕಳಿಗೆ ಅಗತ್ಯವಾದ ಪಾರ್ಕ್, ಮೂಲಭೂತ ಸೌಕರ್ಯಗಳ ಸಹಿತ ಗಮನ ಸೆಳೆಯಲಿದೆ ಎಂದರು.
ಸಭೆಯಲ್ಲಿ, ಕಳ್ಳಿಗೆ ತಾರಾನಾಥ ಶೆಟ್ಟಿ, ಮೋಹನ್ ಶೆಟ್ಟಿ, ಕಾರ್ಪೊರೇಟರ್ ಜುಬೇದಾ, ಮಾಜಿ ಮೇಯರ್ ಅಜೀಜ್, ಶಶಿರಾಜ್ ಅಂಬಟ್ಟಿ, ಆಲ್ವಿನ್ ಪಾಯಸ್, ಕುಮಾರ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.