ಮಂಗಳೂರು,ಅ.8: ಪ್ರತಿಯೊಬ್ಬ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ತನ್ನನ್ನು ತಾನೇ ತೊಡಗಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಬಹುದು. ಮತ್ತು ತಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ನಗರದ ರಥಬೀದಿಯ ಪ.ಪೂ ಕಾಲೇಜಿನ ಸಭಾಂಗಣದಲ್ಲಿ ನಡೆದ ಬಲ್ಮಠ ಸರಕಾರಿ ಜೂನಿಯರ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂತಹ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶವಾಗಿದೆ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿಬಂದರು ವಾರ್ಡ್ ಕಾಫೆರ್Çೀರೇಟರ್ ಶ್ರೀಮತಿ ರಮ್ಭಿಜಾ ಬಾನು, ಅಧ್ಯಕ್ಷತೆ ವಹಿಸಿದ್ದರು ಮತ್ತು ಕೋರ್ಟ್ ವಾರ್ಡ್ ಕಾಫೆರ್Çೀರೇಟರ್ ಎ.ಸಿ ವಿನಯರಾಜ್ ದ್ವಜಾರೋಹಣಗೈದರು, ಸಭೆಯಲ್ಲಿ ಡೊಂಗರಕೇರಿ ಕಾಫೆರ್Çೀರೇಟರ್ ರಾಜೇಂದ್ರಕುಮಾರ್, ಮಾಜಿ ಕಾಫೆರ್Çೀರೇಟರ್ ದೇವಾನಂದ ಪೈ, ಟೌನ್ ಕಾಪೆರ್Çೀರೆಟ್ ಬ್ಯಾಂಕಿನ ಅಧ್ಯಕ್ಶ ನಕುಲ್ ಪೈ ಬಲ್ಮಠ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲ್ ಪಿ.ಪಿ ಜೋಸಪ್ ಮುಂತಾದವರು ಉಪಸ್ಥಿತರಿದ್ದರು.