ಮಂಗಳೂರು ದಕ್ಷಿಣ ವಿದಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬರುವ ಸುಮಾರು 22 ಫಲಾನುಭವಿಗಳಿಗೆ ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಲು ಅದೇಶ ಪತ್ರವನ್ನು ಮಾನ್ಯ ಶಾಸಕರಾದ ಶ್ರೀ ಜೆ. ಆರ್ ಲೋಬೊರವರ ಕಾರ್ಯ ಕಛೇರಿಯಲ್ಲಿ ವಿತರಿಸಲಾಯಿತು. ಈ ಆದೇಶ ಪತ್ರವನ್ನು ಮಾನ್ಯ ಶಾಸಕರಾದ ಶ್ರೀ ಜೆ. ಆರ್ ಲೋಬೊರವರು ಮತ್ತು ಮೇಯರ್ ಶ್ರೀ ಮಾಹಾಬಲ ಮಾರ್ಲಾರವರು ವಿತರಿಸಿದರು.
ಈ ಯೋಜನೆಯಡಿಯಲ್ಲಿಸುಮಾರು ರೂ 1.2 ಲಕ್ಷ ದಷ್ಟು ಸಹಾಯಧನವನ್ನು 4 ಹಂತಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ ತಳಪಾಯ, ಗೋಡೆ, ಮೇಲ್ಛಾವಣಿ, ಹಾಗೂ ಮನೆ ಸಂಪೂರ್ಣವಾದಾಗ ಕಾಮಗಾರಿಯ ಪ್ರತಿ ಹಂತದ ಪೆÇೀಟೊವನ್ನು ಫಲಾನುಭವಿ ಜೊತೆ ತೆಗೆದು ಜಿಪಿಎಸ್ ಮೂಲಕ ನೇರವಾಗಿ ಅದನ್ನು ಬೆಂಗಳೂರಿಗೆ ಕಳಿಸಿ ಅಲ್ಲಿಂದ ನೇರವಾಗಿ ಫಲಾನುಭವಿಯ ಖಾತೆಗೆ ಹಣ ಜಮೆಯಾಗುತ್ತದೆ. ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಜೆ. ಆರ್ ಲೋಬೊರವರು ಮಾತನಾಡಿ ಸಮಾಜದ ಪ್ರತೀಯೊಬ್ಬರಿಗೂ ವಾಸಿಸಲು ಮನೆ ಅಗತ್ಯ ಹಾಗೆ ನಮ್ಮ ಕ್ಷೆತ್ರದ ಒಳಗೆ ಬರುವ ಅತ್ಯಂತ ಕಡುಬಡವರಿಗೆ ಮನೆ ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಬಡವರಿಗೆ ಮಾಡಿದ ಉಪಕಾರವು ಯಾವತ್ತು ಅವರು ಮರೆಯುವುದಿಲ್ಲ ಮತ್ತು ಅವರ ಏಳಿಗೆಗೆ ಶ್ರಮಿಸುವುದು ನಮ್ಮ ದ್ಯೇಯವಾಗಿದೆ ಎಂದರು ನಂತರ ಮಾನ್ಯ ಮೇಯರವರು ಮಾತನಾಡಿ ನಮ್ಮ ಮಹಾನಗರ ವ್ಯಾಪ್ತಿಯಲ್ಲಿ ಸ್ಥಳ ಬಹಳ ಕಡಿಮೆ ಇರುವುದರಿಂದ ಶಾಸಕರ ಕೋರಿಕೆಯಂತೆ ಪಾಲಿಕೆಯ ಹತ್ತಿರದ ಸ್ಥಳದಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಸ್ಥಳ ಪರಿಶೀಲಿಸಿ ಮುಂದಿನ ಕಾರ್ಯಕ್ಕೆ ಉಪಯೋಗಿಸಲಾಗುವುದು ಮತ್ತು ಈಗಿನ ಸರಕಾರಿ ವ್ಯವಸ್ಥೆ ತುಂಬಾ ಪಾರದರ್ಶಕವಾಗಿದೆ ಎಂದರು ಸಮಾರಂಭದಲ್ಲಿ ಪಾಲಿಕೆಯ ಪ್ರಭಾರ ಆಯುಕ್ತ ಶ್ರೀ ಗೋಖುಲ್ದಾಸ್ ನಾಯಕ್, ಅಧಿಕಾರಿಗಳಾದ ಶ್ರೀಮತಿ ಮಾಲಿನಿ ರೊಡ್ರೀಗಸ್ ,ಚಿತ್ತರಂಜನ್, ಕಾಂಗ್ರೇಸ್ ಮುಖಂಡರುಗಳಾದ ಟಿ.ಕೆ ಸುದೀರ್, ಆಶ್ರಪ್ ಬಜಾಲ್, ಮೊದಲಾದವರು ಉಪಸ್ಥಿತರಿದ್ದರು.