ಕೋಡಿಯಾಲ್ ಬೈಲ್ ವಾರ್ಡಿನಲ್ಲಿ ವಿವೇಕಾನಂದರ 156ನೇ ಜಯಂತಿ ಉತ್ಸವ
ಸ್ವಾಮಿ ವಿವೇಕಾನಂದರ 156ರ ಜನ್ಮ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಗೃಹ ಸಚಿವರಾದ ರಾಮಲಿಂಗರೆಡ್ಡಿಯವರು ದೀಪೊದ್ಘಾಟನೆಯ ಮುಖಾಂತರ ಚಾಲನೆ ನೀಡಿದರು. ಶಾಸಕರಾದ ಜೆ.ಆರ್.ಲೋಬೊ, ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಾಜಿ. ಬಿಜೈ ಚರ್ಚ ಧರ್ಮಗುರುಗಳಾದ ವಿಲ್ಸನ್ ವೈಟಸ್ ಡಿಸೋಜ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುರೇಶ್ ಬಳ್ಳಾಲ್, ದ.ಕ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ಹರೀಶ್ ಕುಮಾರ್, ಮಂಗಳೂರು ನಗರ ಪಾಲಿಕೆಯ ಮುಖ್ಯ ಸಚೇತಕರಾದ ಶಶಿಧರ್ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವರು “ವಿವೇಕಾನಂದರ ಆದರ್ಶ ತತ್ವದಂತೆ ಸೌಹಾರ್ದಯುತವಾದ ಜೀವನವನ್ನು ನಡೆಸುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಗತ್ಯ. ಆ ನಿಟ್ಟಿನಲ್ಲಿ ವಿವೇಕಾನಂದರ ಆದರ್ಶಗಳನ್ನು ಪಾಲಿಸೋಣ”ವೆಂದು ಕರೆ ನೀಡಿದರು.
ಶಾಸಕರು ಮಾತನಾಡಿ ಈ ಪಾರ್ಕ್ನ ಅಭಿವೃದ್ಧಿಗೆ ಮಾತ್ರವಲ್ಲದೇ ಕೋಡಿಯಾಲ್ ಬೈಲ್ ವಾರ್ಡನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ À ಕಾರ್ಪೋರೇಟರ್ ಪ್ರಕಾಶ್ ಬಿ ಸಾಲಿಯಾನ್ರವರ ಕಾರ್ಯವನ್ನು ಶ್ಲಾಘಿಸಿದರು. ಕಾರ್ಪೋರೇಟರ್ಗಳಾದ ಭಾಸ್ಕರ್ ಮೊೈಲಿ, ಅಬ್ದುಲ್ ಲತೀಫ್, ಕೇಶವ್ ಮರೋಳಿ, ವಿಶ್ವಾಸ್ ಕುಮಾರ್ದಾಸ್, ಕದ್ರಿ ದೇವಸ್ಥಾನದ ಟ್ರಸ್ಟಿ ಸುರೇಶ್ ಕದ್ರಿ, ಅರುಣ್ ಕುವೆಲ್ಲೊ, ರಮಾನಂದ ಭಂಡಾರಿ ಸ್ಥಳೀಯ ಲೂಡ್ಸ್ ಶಾಲೆಯ ಹಾಗೂ ಸೈಂಟ್ ಪ್ರಾನ್ಸಿಸ್ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯಿನಿಯರಾದ ಲತೀಶ್ಯಾ ಹಾಗೂ ಗ್ರೆಟ್ಟಾ ಅವರು ಭಾಹವಹಿಸಿದ್ದರು. ಮುಂಡಾಲ ಯುವ ವೇದಿಕೆಯ ಅಧ್ಯಕ್ಷಕರಾದ ಕೃಷ್ಣ ಎಲ್ಲೂರು, ದೇವಿಪ್ರಸಾದ್ ಕದ್ರಿ, ಅರುಣ್ ಕದ್ರಿ, ಕಿಶನ್, ಪ್ರಥ್ವಿರಾಜ್, ಜಯರಾಮ್, ಮಮತ ಶೆಟ್ಟಿ, ಭರತ್, ಹರೀಶ್, ದೇವದಾಸ್ ಹರೀಶ್ ಉಳ್ಳಾಲ್ ಉಪಸ್ಥಿತರಿದ್ದರು. ರಘುರಾಜ್ ಕದ್ರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಪೋರೇಟರ್ ಪ್ರಕಾಶ್. ಬಿ ಸಾಲಿಯಾನ್ ಕಾರ್ಯಕ್ರಮವನ್ನು ಸ್ವಾಗತಿಸಿದರು. ಧನ್ಯವಾದವನ್ನು ಪ್ರತಾಪ್ ಸಾಲಿಯಾನ್ ಅವರು ನೀಡಿದರು.