ಮಂಗಳೂರು: ದಕ್ಷಿಣ ವಿಧಾನ ಸಭಾ ಕ್ಷೇತ್ರ, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ, 60 ನೇ ಬೆಂಗ್ರೆ ಕಾಂಗ್ರೆಸ್ ವಾರ್ಡ್ ಸಮಿತಿ ವತಿಯಿಂದ ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಉಚಿತ ವೈದ್ಯಕೀಯ ಜರಗಿತು, ದಂತ ವೈದ್ಯಕೀಯ, ಮಲೇರಿಯಾ, ಮಹಿಳೆಯರಿಗಾಗಿ ಥೈರಾಯಿಡ್ ತಪಾಸಣಾ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಸಬಾ ಬೆಂಗ್ರೆಯಲ್ಲಿ ಜರಗಿತು.

ಶಿಬಿರವನ್ನು ಉದ್ಘಾಟನೆ ಮಾಡಿದ ಶಾಸಕ ಜೆ.ಆರ್.ಲೋಬೊ ಮಾತನಾಡಿ ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ ಇದು 15 ನೇ ಆರೋಗ್ಯ ತಪಾಸಣೆ ಶಿಬಿರವಾಗಿದ್ದು ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸ್ವಸ್ಥ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡಲು ನೆರವಾಗಿದೆ ಎಂದರು.

ಸಮಾಜದಲ್ಲಿ ಪರಿಪೂರ್ಣವಾದ ಎಲ್ಲರಿಗೂ ಆರೋಗ್ಯವನ್ನು ನೀಡುವ ನಿಟ್ಟಿನಲ್ಲಿ ಇದು ಉತ್ತಮವಾದ ಕೆಲಸ. ಇಂಥ ಆರೋಗ್ಯ ಶಿಬಿರವನ್ನು ಇನ್ನೂ ನಡೆಸಲಾಗುವುದು ಎಂದರಲ್ಲದೇ ಇದರಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಆರೋಗ್ಯ ಸಮಿತಿ ಅಧ್ಯಕ್ಷ ಬಿ.ಪ್ರಭಾಕರ ಶ್ರೀಯಾನ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರ ಸಮಿತಿಯ ಸದಸ್ಯರಾದ ಎಂ.ಫಾರೂಕ್, ಶೇಖರ ಸುವರ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮೊಹಿದ್ದೀನ್ ಬಿಲಾಲ್, ದಕ್ಷಿಣ ವಲಯ ಉಪಾಧ್ಯಕ್ಷರಾದ ಅಸ್ಲಾಮ್ ಬೆಂಗ್ರೆ, ವಾರ್ಡ್ ಅಧ್ಯಕ್ಷರಾದ ಆಸೀಫ್ ಅಹಮ್ಮದ್ ಹಾಗೂ ಫಯಾಝ್, ಮಹಮದ್ ಹುಸೇನ್, ಇದ್ದೀನ್ ಕುಂಜಿ, ಸುಲೈಮಾನ್ ಐಎಂಎನ್, ಟಿ.ಪಿ,ಮುಸ್ತಾಪ. ಇಸೂಫ್ ಉಚ್ಚಿಲ್, ಇಮ್ರಾನ್, ಸುರೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಕಣ್ಣು, ಕಿವಿ, ಗಂಟಲು, ಮೂಳೆ, ಸ್ತ್ರೀ ರೋಗ, ಚರ್ಮ, ಸಾಮಾನ್ಯ ಕಾಯಿಲೆ ಮತ್ತು ಮಕ್ಕಳ ಅರೋಗ್ಯ ತಪಾಸಣೆಯನ್ನು ಮಾಡಲಾಯಿತು.ಈ ಶಿಬಿರದಲ್ಲಿ ಅಗತ್ಯವುಳ್ಳವರಿಗೆ ಓದುವ ಕನ್ನಡಕವನ್ನು ಉಚಿತವಾಗಿ ನೀಡಲಾಯಿತು. ಸುಮಾರು 500ಕ್ಕೂ ಮಿಕ್ಕಿದ ಜನ ಆಗಮಿಸಿ ಬೈದ್ಯಕೀಯ ತಪಾಸಣೆ ಪಡೆದರು.

ಕೆ ಎಂಸಿ ಆಸ್ಪತ್ರೆ, ಎ.ಜೆ.ಆಸ್ಪತ್ರೆ, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜ್, ಕರ್ನಾಟಕ ಆಯುರ್ವೇದಿಕ ಕಾಲೇಜು, ಆಯುಷ್ ಇಲಾಖೆ, ಆಯುಷ್ ವೈದ್ಯಾಧಿಕಾರಿಗಳ ಸಂಘ, ಮಂಗಳೂರು ಮಹಾನಗರ ಪಾಲಿಕೆ ಮತ್ತು ನಗರ ಆರೋಗ್ಯ ಕೇಂದ್ರಗಳು ಭಾಗವಹಿಸಿದ್ದವು.