ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗ ಲಕ್ಷದ್ವೀಪಕ್ಕೆ ತೆರಳುತ್ತಿದ್ದು ಈ ನಿಯೋಗ ಲಕ್ಷ ದ್ವೀಪ ಸರ್ಕಾರದೊಂಡಿಗೆ ಮಂಗಳೂರಲ್ಲಿ ವ್ಯಾಪಾರ ವಹಿವಾಟು ಪುನರಾರಂಭಿಸುವ ನಿರೀಕ್ಷೆ ಇದೆ.

ಈಗ ಲಕ್ಷ ದ್ವೀಪ ಮಂಗಳೂರಿನ ಬದಲು ಕೇರಳವನ್ನು ಹೆಚ್ಚು ಪ್ರೋತ್ಸಾಹಿಸುತ್ತಿದೆ. ಮಂಗಳೂರಲ್ಲಿ ಜೆಟ್ಟಿಯ ಸಮಸ್ಯೆ ಇದ್ದು ಅದಕ್ಕಾಗಿ ಪರ್ಯಾಯ ಕ್ರಮ ಅನುಸರಿಸುತ್ತಿದೆ. ಆದರೆ ಶಾಸಕ ಜೆ.ಆರ್.ಲೋಬೊ ನೇತೃತ್ವದ ನಿಯೋಗ ಲಕ್ಷ ದ್ವೀಪ ಮಂಗಳೂರಿಗೇ ಬರುವಂತೆ ಮಾತುಕತೆ ನಡೆಸಲಿದೆ.

ಲಕ್ಷ ದ್ವೀಪವನ್ನು ವ್ಯಾಪಾರ ಪುನರಾರಂಭ ಮಾಡುವಂತೆ ಮನವೊಲಿಸಲಾಗುವುದು ಮತ್ತು ಮಂಗಳೂರು ಹಳೆ ಬಂದರಿನಲ್ಲಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲು ಮನವಿ ಮಾಡಲಾಗುವುದು ಇದು ಸಾಧ್ಯವಾದರೆ ಲಕ್ಷ ದ್ವೀಪಕ್ಕಾಗಿಯೇ ಪ್ರತ್ಯೇಕ ಜೆಟ್ಟಿಯಾಗುತ್ತದೆ. ಈ ಮೊತ್ತವನ್ನು ಲಕ್ಷದ್ವೀಪವೇ ಪಾವತಿಸುವಂತೆ ಮನವಿ ಮಾಡಲಾಗುವುದು ಎಂದರು.

ತಾವೂ ಈಗಾಗಲೇ ಲಕ್ಷ ದ್ವೀಪದ ಸಂಸದರನ್ನು ಸಂಪರ್ಕಿಸಿದ್ದು ಅವರು ಕೂಡಾ ಮಾತುಕತೆಗೆ ಆಸಕ್ತಿ ತೋರಿಸಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಲಕ್ಷದ್ವೀಪದೊಂದಿಗೆ ಮಾತು ಕತೆ ಫಲಪ್ರದವಾದರೆ ಮಂಗಳೂರು ಬಂದರಿನಲ್ಲಿ ಮತ್ತೆ ವಹಿವಾಟು ವೃದ್ದಿಯಾಗುತ್ತದೆ ಎಂದ ಅವರು ಈಗ ಲಕ್ಷ ದ್ವೀಪ ಕೇರಳಕ್ಕೆ ತನ್ನ ವಹಿವಾಟು ಮುಂದುವರಿಸಿದೆ ಎಂದರು.