ಮಂಗಳೂರು: ಅತ್ತಾವರ ಮತ್ತು ಮಂಗಳೂರು ತೋಟ ಹೋಬಳಿಯ ಕಂದಾಯ ಅದಾಲತ್ ಕಾರ್ಯಕ್ರಮ ಸೆಪ್ಟಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಎನ್ ಜಿ ಒ ಹಾಲ್ ನಲ್ಲಿ ಜರುಗಲಿದ್ದು ಕಂದಾಯ ಇಲಾಖೆ ಪಹಣಿ (ಖಖಿಅ) ತಿದ್ದು ಪಡಿ ಸಹಿತ ಕಂದಾಯ ಇಲಾಖೆಗೆ ಸಂಬಂಧಿಸಿ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದ್ದಾರೆ.
ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಮುಖ್ಯವಾಗಿ ಆರ್ ಟಿ ಸಿಯಲ್ಲಿ ಇರುವಂತಹ ತಿದ್ದುಪಡಿಯನ್ನು ಸ್ಥಳದಲ್ಲೇ ಮಾಡಿಕೊಡುವುದುವುದು ಮತ್ತು ದೊಡ್ಡ ಮಟ್ಟದ ತಿದ್ದುಪಡಿಯಾಗಿದ್ದರೆ ಅದಕ್ಕೆ ಅರ್ಜಿಯನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೇ ಇದೇ ಸಂದರ್ಭದಲ್ಲಿ ಅಂಗವಿಕಲ, ವೃದ್ದಾಪ್ಯ, ವಿಧವಾ, ಸಂಧ್ಯಾಸುರಕ್ಷಾ ಮುಂತಾದವುಗಳ ಪಿಂಚಣಿ ಪತ್ರ ವಿತರಣೆಯನ್ನು ಮಾಡಲಾಗುವುದು. ಇವುಗಳನ್ನು ಪಡೆದುಕೊಳ್ಳಲು ಅತ್ತಾವರ ಮತ್ತು ಮಂಗಳೂರುತೋಟ ಹೋಬಳಿಯಲ್ಲದವರೂ ಬರಬಹುದಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ತಮ್ಮ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಅವರು ವಿನಂತಿ ಮಾಡಿದ್ದಾರೆ.
ಈ ಕಂದಾಯ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರು ವಹಿಸಲಿದ್ದು ತಹಶೀಲ್ದಾರ್ ಮಹಾದೇವಯ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.