ಮಂಗಳೂರು: ಕೊಟ್ಟಾರ ಚೌಕಿ ( ಇನ್ಪೋಸಿಸ್ ಹಿಂಬದಿ ರಸ್ತೆ) ರಸ್ತೆಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನ 100 ಕೋಟಿ ರೂಪಾಯಿಯಲ್ಲಿ 1.50 ಕೋಟಿ ವೆಚ್ಚದಲ್ಲಿ ಇಂದು ಶಾಸಕ ಜೆ.ಆರ್.ಲೋಬೊ ಅವರು ಕಾಂಕ್ರೀಟಿಕರಣ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು ಈ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿದರೆ ಮುಂದಿನ ದಿನಗಳಲ್ಲಿ ವಾಹನ ದಟ್ಟಣಿ ಕಡಿಮೆಯಾಗಲಿದೆ. ಮಾತ್ರವಲ್ಲಾ ಮುಂದಿನ ಮೂರು ತಿಂಗಳಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನೊಂದು ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿ ಹೆಚ್ಚಿನ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಲ್ಲದೇ ಈ ರಸ್ತೆಯಲ್ಲಿ ಸಂಚಾರ ಸುಲಲಿತಾ ಮಾಡಿಕೊಡಲಾಗುವುದು ಎಂದರು.
ಮೇಯರ್ ಹರಿನಾಥ್, ಗುರುಸ್ವಾಮಿ ಕುಂಜಿ ರಾಮನ್, ಮುಖ್ಯಾಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿಲಾಟ್ ಪಿಂಟೊ, ಕವಿತಾ ಸನಿಲ್, ಕು. ಅಪ್ಪಿ, ಕಾರ್ಪೊರೇಟರ್ ರಜನಿಶ್. ಪ್ರಕಾಶ್ ಸಾಲಿಯನ್, ನಾಗವೇಣಿ, ಆಯುಕ್ತರಾದ ಮಹ್ಮದ್ ನಜೀರ್, ಕೆ ಎಸ್ ಆರ್ ಟಿ ನಿರ್ದೇಶಕ ಟಿ.ಕೆ ಸುಧೀರ್, ಮನಪ ಅಧಿಕಾರಿಗಳಾದ ಲಿಂಗೇಗೌಡ , ಯಶವಂತ ಕುಮಾರ್, ಲಕ್ಷ್ಮಣ ಪೂಜಾರಿ, ಗುತ್ತಿಗೆದಾರ ಎಮ್ .ಜಿ .ಹುಸೇನ್ ಮುಂತಾದವರು ಉಪಸ್ಥಿತರಿದ್ದರು.