ಮಂಗಳೂರು: ನಗರದ ಬ್ರಹತ್ ತೋಡುಗಳಲ್ಲಿ ಒಳಚರಂಡಿಯ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರಲ್ಲಿ ತೊಂದರೆ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ರಾಜ್ಯ ಸರ್ಕಾರದ ಅಮ್ರತಯೋಜನೆಯಲ್ಲಿ ಒಳಚರಂಡಿ ವ್ಯವಸ್ಥಯನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು ಇಂದು ನಗರದ ಜಪ್ಪುಕುಡುಪಾಡಿದೋಟ ಬಳಿ ಚರಂಡಿತಡೆಗೋಡೆ ನಿರ್ಮಾಣ (45 ಲಕ್ಷ), ಉರ್ವಾ ಹೊಗೈಬೈಲ್ ಬಳಿ ಹರಿಯುವ ತೋಡಿಗೆ ತಡೆಗೋಡೆ ನಿರ್ಮಾಣ (40 ಲಕ್ಷ), ಅಳಪೆ ಉತ್ತರ ವಾರ್ಡ್ ಪರಂಬೋಕು ತೋಡಿನ ತಡೆಗೋಡೆ ನಿರ್ಮಾಣ (30 ಲಕ್ಷ), ಕುಲಶೇಖರ ಕುಚ್ಚಿಕಾಡಿನಿಂದ ಮಹಾಕಾಳಿವರೆಗೆ ಹರಿಯುವ ತೋಡಿನ ದಂಡೆ ಸಂರಕ್ಷಣೆ ಕಾಮಗಾರಿ (30 ಲಕ್ಷ)ಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಈ ಕಾಮಗಾರಿಗಳು ಮುಗಿದರೆ ಈ ಭಾಗದ ಜನರಿಗೆ ಪ್ರಯೋಜನವಾಗಲಿದೆ. ಮಳೆಗಾಲದಲ್ಲಿ ಮಳೆ ನೀರು ಹರಿದು ಈ ಭಾಗದಲ್ಲಿ ನುಗ್ಗಿ ತೊಂದರೆಯಾಗುತ್ತಿದೆ. ಈ ಕಾಮಗಾರಿಗಳನ್ನು ಮುಂದಿನ ಮೂರು ತಿಂಗಳ ಒಳಗೆ ಮುಗಿಸುವಂತೆಯೂ ಶಾಸಕರು ಅದೇಶಿಸಿದರು. ಈ ಕಾಮಗಾರಿಗಳು ಸಣ್ಣ ನೀರಾವರಿ ಇಲಾಖೆಯಿಂದ ಶಾಸಕ ಜೆ.ಆರ್.ಲೋಬೊ ಅವರ ವಿಶೇಷ ಶಿಫಾರಸಿನ ಮೇರೆಗೆ ಮಂಜೂರಾಗಿದೆ
ಈ ಸಂದರ್ಭದಲ್ಲಿ ಕಾರ್ಪೊರೇಟರಗಳಾದ ಶೈಲಜಾ, ರಾಧಾಕೃಷ್ಣ, ಜುಬೇಧ ಅಜೀಜ್, ಪ್ರಕಾಶ್ ಅಳಪೆ ಹಾಗೂ ಕೆ.ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಕೆನರಾ ಬ್ಯಾಂಕ್ ಮಾಜಿ ನಿರ್ದೇಶಕ ಉಮೇಶಚಂದ್ರ, ಮಾಜಿ ಮೂಡ ಅಧ್ಯಕ್ಷ ಡಾ.ಬಿ.ಜಿ.ಸುವರ್ಣ, ಮಾಜಿ ಮೇಯರ್ ಅಬ್ದುಲ್ ಅಜೀಜ್, ಮುಖಂಡರಾದ ಕಮಲಾಕ್ಷ ಕುಂದರ್, ವಿಜಯಲಕ್ಷಿ, ಮೂಡ ಸದಸ್ಯೆ ಶೋಭಾ ಕೇಶವ, ಚೇತನ ಉರ್ವಾ, ದಿಲೀಪ್, ಚಲನಚಿತ್ರ ನಟ ನವೀನ್ ಡಿ ಪಡೀಲ್, ಅಶೋಕ ಕುಡುಪಾಡಿ, ಮೊಹಮದ್ ನವಾಜ್, ಆಲ್ವೀನ್ ಪಯಾಸ್, ಹೆನ್ರೀ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.