ಮಂಗಳೂರು: ಉರ್ವಾ ಮಾರುಕಟ್ಟೆ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಜನರು ಸಹಕಾರ ನೀಡಿದರೆ ಮಾತ್ರ ಈ ಎಲಾ ಕೆಲಸಗಳೂ ಸಾಧ್ಯ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಉರ್ವಾ ಮಾರಿಗುಡಿ ದೇವಸ್ಥಾನದ ಬಳಿ ಇರುವ ಕಟ್ಟಪುಣಿಯನ್ನು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯಾಗಿಸಿದ್ದನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಕಾಮಗಾರಿಯನ್ನು ಮಹಾನಗರಪಾಲಿಕೆ ಸಾಮಾನ್ಯ ನಿಧಿಯಿಂದ ಪೂರ್ಣಗೊಳಿಸಲಾಗಿದ್ದು ಇಲ್ಲಿ ಹಲವಾರು ಮನೆಗಳಿದ್ದು ರಸ್ತೆಯಿಲ್ಲದೆ ಜನರು ಕಷ್ಟಪಡುತ್ತಿದ್ದರು.
ಕಟ್ಟಪುಣಿಯಲ್ಲೇ ಸಂಚರಿಸುತ್ತಿದ್ದವರು ಈಗ ರಸ್ತೆಯಾಗಿರುವುದರಿಂದ ನಿರಾತಂಕವಾಗಿ ಹೋಗಿಬರಬಹುದು. ಜನರ ಸಹಕಾರ ಇದ್ದರೆ ಯಾವುದು ಸಾಧ್ಯವಿಲ್ಲವೋ ಅವುಗಳನ್ನು ಸಾಧ್ಯವಾಗಿಸಬಹುದು ಎನ್ನುವುದಕ್ಕೇ ಈ ರಸ್ತೆ ಉದಾಹರಣೆಯಾಗಿದೆ ಎಂದರು. ಉರ್ವಾ ಮಾರುಕಟ್ಟೆ ನಿರ್ಮಾಣವಾದರೆ ಸುಲ್ತಾನ್ ಬತ್ತೇರಿಗೆ ಹೋಗುವ ರಸ್ತೆಯೂ ಮುಂದಿನ ದಿನಗಳಲಿ ಅಭಿವೃದ್ಧಿಯಾಗುವುದು. ಈ ಮೂಲಕ ಇಡೀ ಪ್ರದೇಶ ಅಭಿವೃದ್ಧಿಯನ್ನು ಕಾಣಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ರಾಧಾಕೃಷ್ಣ, ವಾರ್ಡ್ ಅಧ್ಯಕ್ಷ ಉಮೇಶ್ ಕೋಟ್ಯಾನ್, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಆನಂದ, ರಮೇಶ್ ತಂತ್ರಿ, ಪುರುಷೋತ್ತಮ, ಗಣೇಶ್ , ಪ್ರವೀಣ್, ಗುತ್ತಿಗೆದಾರ ಲಿಯಾಕತ್ ಮೊದಲಾದವರು ಉಪಸ್ಥಿತರಿದ್ದರು.