ಮಂಗಳೂರು ಮಹಾನಗರ ಪಾಲಿಕೆಯ 25ನೇ ದೇರೆಬೈಲು ಪಶ್ಚಿಮ ವಾರ್ಡಿನ ಕೊಟ್ಟಾರ ಪರಿಸರದ ಸುಮಾರು 35ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಇಂದು ತಾ: 03.05.2018ರಂದು ಸಂಜೆ ಕದ್ರಿಯಲ್ಲಿರುವ ಕಾಂಗ್ರೇಸ್ ಚುನಾವಣಾ ಕಛೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ. ಜೆ.ಆರ್.ಲೋಬೊರವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು. ಬಿಜೆಪಿ ಪಕ್ಷದ ದುರ್ಬಲ ಆಡಳಿತ, ನಾಯಕರಿಂದ ಕಾರ್ಯಕರ್ತರ ಶೋಷಣೆ, ಧರ್ಮದ ರಾಜಕೀಯ ಇದರಿಂದ ಬೆಸತ್ತು ಬಿಜೆಪಿಯನ್ನು ತ್ಯಜಿಸಿ ಕಾಂಗ್ರೆಸಿಗೆ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತ, ಜಾತ್ಯಾತೀತ ನಿಲುವು ಇವುಗಳಿಂದ ಆಕರ್ಷಿತರಾಗಿ ಹಿರಿಯರಾದ ಚಂದ್ರಶೇಖರ, ರಾಜೇಶ್ ಶೆಟ್ಟಿ, ದುರ್ಗೇಶ್ ಹಾಗೂ ಯುವ ನಾಯಕರಾದ ಕಿಶನ್, ಪ್ರಜ್ವಲ್, ಸಾಗರ್, ರಾಕೇಶ್, ಪ್ರತೀಕ್ ಇತರರ ನೇತೃತ್ವದಲ್ಲಿ ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊರವರು, ದೇಶದ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್ಸಿನ ಸಿದ್ದಾಂತವನ್ನು ನಂಬಿ ತಾವುಗಳು ಕಾಂಗ್ರೆಸನ್ನು ಸೇರಿದ್ದೀರಿ. 1947ರಲ್ಲಿ ಸ್ವಾಂತಂತ್ರ್ಯ ದೊರಕಿದಾಗ, ದೇಶದ ಪರಿಸ್ಥಿತಿ ಚಿಂತಾಜನಕವಾಗಿತ್ತು. ಬಡತನ ಬಹಳವಾಗಿ ದೇಶದೆಲ್ಲೆಡೆ ಕಾಡುತ್ತಿತ್ತು. ಕಾಂಗ್ರೆಸ್ ಸರ್ಕಾರದ ಪಂಚವಾರ್ಷಿಕ ಯೋಜನೆ, ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಉತ್ತೇಜನ ನೀಡಿತ್ತು. ಅನೇಕ ಕೈಗಾರಿಕೊದ್ಯಮಿಗಳು ಕಾಂಗ್ರೆಸ್ ಆಡಳಿತ ಇರುವಾಗ ಪ್ರಾರಂಭಿಸಲಾಯಿತು. ಇದು ಪ್ರಪಂಚದ ಬಲಿಷ್ಟ ರಾಷ್ಟ್ರಗಳ ಜೊತೆಗೆ ಗುರುತಿಸುವಂತೆ ಸಹಕರಿಸಿತ್ತು. ಭೂ ಸುಧಾರಣಾ ಕಾಯಿದೆಯನ್ನು ಅನುಷ್ಟಾನಕ್ಕೆ ತಂದು ಉಳುವವನಿಗೆ ಭೂಮಿಯನ್ನು ಒದಗಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನ ಮಾಡಿತ್ತು. ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಕಾಂಗ್ರೆಸ್ ನೇತೃತ್ವದ ಸರಕಾರ ಬಹಳವಾಗಿ ಪ್ರಯತ್ನಿಸಿದೆ. ಆದರೂ ಈಗಿನ ಬಿಜೆಪಿ ಪಕ್ಷದವರು ಕಳೆದ 70 ವರ್ಷಗಳಲ್ಲಿ ದೇಶಕ್ಕೆ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ. ದೇಶದ ಅಭಿವೃದ್ಧಿಗೆ ಬಿಜೆಪಿಯವರು ಯಾವುದೇ ಕೊಡುಗೆ ನೀಡುತ್ತಿಲ್ಲ. ಕೇವಲ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಮುಗ್ದ ಜನರನ್ನು ತೊಂದರೆಗೆ ಒಳಪಡಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ನೆಲೆಯಲ್ಲಿ ಸಂವಿಧಾನ ರಕ್ಷಣೆ ಮಾಡುತ್ತಿವಲ್ಲಿ ಕಾಂಗ್ರೆಸ್ ಸಾಧನೆ ಮಹತ್ವದ್ದು. ನಮ್ಮದು ಬಹುಸಂಸ್ಕ್ರತಿಯ, ಬಹುಬಾಷೆಯ, ಬಹು ಧರ್ಮಗಳು ದೇಶ. ಧಾರ್ಮಿಕ ವಿಚಾರದಲ್ಲಿ ಕಾಂಗ್ರೆಸ್ ಯಾವಾಗಲೂ ರಾಜಕೀಯ ಮಾಡುವುದಿಲ್ಲ. ಮಂಗಳೂರಿನಲ್ಲಿ ನಿರುದ್ಯೋಗ ಸಮಸ್ಯೆ ಇದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಲಿತು ವಿದೇಶಗಳಿಗೆ ಹೋಗುತ್ತಾರೆ. ಆದ್ದರಿಂದ ಮಂಗಳೂರಿನಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಇಲ್ಲಿನ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮೂಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಕಾರ್ಪೋರೇಟರ್ಗಳಾದ ನಾಗವೇಣಿ, ಪ್ರವಿಣ್ಚಂದ್ರ ಆಳ್ವ, ಮಾಬಲ ಮಾರ್ಲ ಹಾಗೂ ಪಕ್ಷದ ಪ್ರಮುಖರಾದ ಪದ್ಮನಾಭ ಅಮೀನ್, ಸತೀಶ್ ಪೂಜಾರಿ, ಜಯರಾಮ ಕರಂದೂರು, ಮೊಹನಶೆಟ್ಟಿ, ಅಜೀತ್ ಕುಮಾರ್, ಚೇತನ್ ಕುಮಾರ್, ಮೆರಿಲ್ ರೇಗೋ, ಡೆನಿಸ್ ಡಿ’ಸಿಲ್ವ, ಅರುಣ್ ಕೊವೆಲ್ಲೋ, ರಮಾನಂದ ಪೂಜಾರಿ, ಅಬ್ದುಲ್ ಅಜೀಜ್ ಮತ್ತಿತರು ಉಪಸ್ಥಿತರಿದ್ದರು.