ಕಂಕನಾಡಿ ಗುರುಪ್ರಸಾದ್ ರಸ್ತೆ ಉದ್ಘಾಟನೆ
ಮಂಗಳೂರು: ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಸುಮಾರು 29 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ 49ನೇ ಕಂಕನಾಡಿ ‘ಬಿ’ ವಾರ್ಡ್ನ ಗುರುಪ್ರಸಾದ್ ಲೇನ್ ಹಾಗೂ ವಾಸುಕಿನಗರದ ರಸ್ತೆಯನ್ನು ಶಾಸಕ ಜೆ.ಆರ್.ಲೋಬೊರವರು ಗುರುವಾರ ಉದ್ಘಾಟಿಸಿದರು.
ಬಳಿಕ, ಶಾಫಿ ಕ್ಲಿನಿಕ್ ರಸ್ತೆ, ಎಕ್ಕೂರು, ನೆಕ್ಕರೆಮಾರ್ ಮಹಾಲಿಂಗೆಶ್ವರ ದೇವಸ್ಥಾನದ ರಸ್ತೆಯನ್ನು ಪರೀಶಿಲಿಸಿ ಕಾಂಕ್ರೀಟಿಕರಣಗೊಳಿಸಲು ಅನುದಾನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ಪ್ರವಿಣ್ ಚಂದ್ರ ಆಳ್ವ, ವಾರ್ಡ್ ಅಧ್ಯಕ್ಷ ಭರತ್ ರಾಮ್, ಉಮೇಶ್ ದೆವಾಡಿಗ, ಶಶಿಧರ್ ಕೊಟ್ಟಾರಿ, ಕೃತಿನ್ ಕುಮಾರ್, ವಿಲ್ಫಿ, ಶಬೀರ್, ನವೀನ್ ಲೋಬೊ ಮತ್ತೀತ್ತರು ಉಪಸ್ಥಿತರಿದ್ದರು.

Image from post regarding Road inaugurated in Kankanady B ward

Image from post regarding Road inaugurated in Kankanady B ward

Image from post regarding Road inaugurated in Kankanady B ward

Image from post regarding Road inaugurated in Kankanady B ward