ಮಂಗಳೂರು: ಕರ್ನಾಟಕ ಸರಕಾರದ ಎಸ್. ಎಫ್. ಸಿ. ನಿಧಿಯಿಂದ ಸುಮಾರು 38 ಲಕ್ಷ ರೂಪಾಯಿ ವೆಚ್ಚದಲ್ಲಿ ಬೋಳಾರ ವಾರ್ಡಿನ ಜೆಪ್ಪು ಮಾರ್ಕೆಟ್ ಬಳಿ ಇರುವ ರಸ್ತೆಯ ಕಾಂಕ್ರಿಟ್ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊರವರು ಇತ್ತಿಚಿಗೆ ನೇರವೆರಿಸಿದರು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಶಾಸಕರು ನಗರದ ಎಲ್ಲಾ ಮುಖ್ಯ ರಸ್ತೆಗಳನ್ನು ಹಂತ ಹಂತವಾಗಿ ಕಾಂಕ್ರಿಟಿಕರಣಗೊಳಿಸಲಾಗುವುದು. ಅನೇಕ ರಸ್ತೆಗಳಲ್ಲಿ ಬಾಕಿ ಉಳಿದ ಫುಟ್ಪಾತ್ ಕಾಮಗಾರಿಗಳಿಗೆ ಅನುದಾನ ಸಾಕಷ್ಟು ಇದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕಾಮಾಗಾರಿಯನ್ನು ಪ್ರಾರಂಬಿಸಲಾಗುವುದು. ಈಗಾಗಲೇ ನಗರದ ಶೀವಭಾಗ್ನಿಂದ ಬೆಂದೂರುವೆಲ್ ತನಕ ಮಳೆನೀರಿನ ಚರಂಡಿನ ಹಾಗು ಫುಟ್ಪಾತ್ನ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗುವುದು ಎಂದು ತೀಳಿಸಿದರು.
ಪಾಲಿಕೆಯ ಮೇಯರ್ ಜೆಸಿಂತಾ ಆಲ್ಫ್ರೇಡ್, ಕಾರ್ಪೋರೇಟರ್ ರತಿಕಲಾ, ಪ್ರೇಮಾನಂದ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಸುರೇಶ್ ಶೆಟ್ಟಿ, ಟಿ.ಕೆ. ಸುಧೀರ್, ರಮಾನಂದ್ ಬೋಳಾರ್, ದುರ್ಗಾ ಪ್ರಸಾದ್, ನಮೀತಾ ರಾವ್, ಬೆನೆಟ್ ಡಿ’ಮೆಲ್ಲೊ, ಹರೀಶ್ ಕುಂಬ್ಳೆ, ಶಾಫಿ ಅಹ್ಮದ್, ಪಾಲಿಕೆ ಅಧಿಕಾರಿಗಳಾದ ರವಿಶಂಕರ್, ಪ್ರತೀಮ ಮೊದಲಾದವರು ಉಪಸ್ಥಿತರಿದ್ದರು.