ಮಂಗಳೂರು: ಶಾಸಕ ಜೆ. ಆರ್ ಲೋಬೊ ಲೋಕೋಪಯೊಗಿ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳೂರು-ಕಾಸರಗೋಡು ರಾಷ್ಟ್ರಿಯ ಹೆದ್ದಾರಿಯಲ್ಲಿ ಬರುವ ನೇತ್ರಾವತಿ ಸೇತುವೆಯಿಂದ ಅಡ್ಯಾರು-ಕಣ್ಣೂರು ಬೈಪಾಸ್ ರಸ್ತೆ ನಿರ್ಮಿಸುವ ಹೊಸ ಯೋಜನೆಯ ಪೂರ್ವಭಾವಿಯಾಗಿ ಸ್ಥಳ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದ ಶಾಸಕರು ಹೊಸ ಬೈಪಾಸ್ ರಸ್ತೆ ನಿರ್ಮಿಸುವುದರಿಂದ ನಗರದಲ್ಲಿ ವಾಹನ ಒತ್ತಡ ನಿವಾರಣೆ, ರೈಲ್ವೆ ಸ್ಟೇಷನ್ಗೆ ಸಂಪರ್ಕ ಹಾಗೂ ಈ ಪ್ರದೇಶದಲ್ಲಿ ವಸತಿ, ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿ ನಗರ ವಿಸ್ತಾರಗೊಳ್ಳಲಿದೆ ಎಂದು ಹೇಳಿದರು.
ನೇತ್ರಾವತಿ ಸೇತುವೆಯಿಂದ ಕಣ್ಣೂರು ವರೆಗೆ ನದಿ ತೀರದಲ್ಲಿ ಈ ರಸ್ತೆ ನಿರ್ಮಿಸುವುದರಿಂದ ಈ ಯೋಜನೆ ಪ್ರವಸೋದ್ಯಮಕ್ಕೆ ಪೂರಕವಾಗೆದೆ. ಸುಮಾರು 8ಕಿ.ಮೀ ಉದ್ದ ಹಾಗು 30ಮಿ ಅಗಲದ ಈ ಬೈಪಾಸ್ ರಸ್ತೆಯನ್ನು ಮಳೆಗಾಲದಲ್ಲಿ ನೇತ್ರಾವತಿಯಿಂದ ಪ್ರವಾಹ ಬರುವ ಮಟ್ಟದಿಂದ ಎತ್ತರಕ್ಕೆ ನಿರ್ಮಿಸಿ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡುವುದಾಗಿ ತೀಳಿಸಿದರು.
ಸುಮಾರು 20 ಕೋಟಿ ವೆಚ್ಚದ ಈ ಯೋಜನೆಗೆ ರಾಜ್ಯ ಲೋಕೋಪಯೋಗಿ ಹಾಗು ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆಮಾಡಲು ಪತ್ರ ಬರೆಯುತ್ತೇನೆ ಹಾಗು ಸಚಿವರಲ್ಲಿ ವಿನಂತಿಸುದಾಗಿ ತೀಳಿಸಿದರು.
ಲೋಕೋಪಯೋಗಿ ಅಧಿಕಾರಿಗಳಿಗೆ ಕೂಡಲೆ ಸರ್ವೆ ಕಾರ್ಯ ಮಾಡಿ, ಡಿಪಿಅರ್ ತಯಾರಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ಪ್ರವಿಣ್ ಚಂದ್ರ ಅಳ್ವ, ಲೋಕೋಪಯೋಗಿ ಅಧಿಕಾರಿಗಳಾದ ಧರ್ಮರಾಜ್, ಸ್ಥಳಿಯರಾದ ಟಿ.ಕೆ. ಸುಧೀರ್, ರಾಮಾನಚಿದ್ ಪೂಜಾರಿ, ಕ್ರತಿನ್ ಕುಮಾರ್, ಹರ್ಬಟ್ ಡಿ ಸೋಜ ಮುಂತಾದವರು ಉಪಸ್ಥಿತರಿದ್ದರು.