ಇಂದು ದಿನಾಂಕ: 30.04.2018 ರಂದು ಬೆಳಗ್ಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಜೆ.ಆರ್.ಲೋಬೋ ರವರು ನಗರದ ಪೋಲಿಸ್ ಲೇನ್ನಲ್ಲಿರುವ ಶ್ರೀ. ಮುನೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತದನಂತರ ಅವರು ಪೋಲಿಸ್ ಲೇನ್ನಲ್ಲಿರುವ ಪೋಲಿಸ್ ವಸತಿ ಗೃಹ, ಪಾಂಡೇಶ್ವರ ಹಾಗು ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಸುಮಾರು 250ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ, ಕಾಂಗ್ರೇಸ್ ಪಕ್ಷದ ಪರವಾಗಿ ಮತಯಾಚನೆ ನಡೆಸಿದರು. ಭೇಟಿ ನೀಡಿದ ಮನೆಗಳಲ್ಲಿರುವ ಜನರು ಶಾಸಕ ಲೋಬೊರವರ 5 ವರ್ಷಗಳ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭ್ಯರ್ಥಿ ಲೋಬೊ ರವರು, ಮಂಗಳೂರಿನ ಜನರು ಅಭಿವೃದ್ಧಿ ಪರವಾಗಿ ಒಲವುಳ್ಳವರು. ಜನತೆ ಅಭಿವೃದ್ಧಿಯನ್ನು ಬಯಸಿದ್ದಾರೆ. ಕಳೆದ 20 ವರ್ಷಗಳಲ್ಲಿ ಆಗದ ಕೆಲಸಗಳು ಕೇವಲ 5 ವರ್ಷಗಳಲ್ಲಿ ಆಗಿವೆ. ಹಲವಾರು ಯೋಜನೆಗಳು ಟೆಂಡರ್ ಹಂತದಲ್ಲಿದೆ. ಅನೇಕ ವರ್ಷಗಳಲ್ಲಿ ನೆನೆಗುದಿಗೆ ಬಿದ್ದಿರುವ ಓಲ್ಡ್ ಕೆಂಟ್ ರಸ್ತೆ ಕಾಂಕ್ರೀಟಿಕರಣ ಆಗಿ ಜನರು ನೆಮ್ಮದಿಯಿಂದ ಪ್ರಯಾಣಿಸುವಂತಾಗಿದೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ದುಲ್ ಸಲಿಂ, ಸದಾಶಿವ ಅಮೀನ್, ಪ್ರಭಾಕರ್ ಶ್ರೀಯಾನ್, ಸುರೇಶ್ ಶೆಟ್ಟಿ, ರಮಾನಂದ ಪೂಜಾರಿ, ಕಾರ್ಪೋರೇಟರ್ ದಿನೇಶ್.ಪಿ.ಎಸ್, ಮಾಜಿ ಕಾರ್ಪೋರೇಟರ್ ಸುಜಾತಾ ಅಹಲ್ಯ, ವಾರ್ಡ್ ಅಧ್ಯಕ್ಷ ಸುರೇಶ್, ಗೀತಾ, ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.
Recent News
- ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಭರ್ಜರಿ ಬೆಂಬಲ
- ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆಗೆ ಜನಸಾಗರ
- ಮಂಗಳೂರು ದಕ್ಷಿಣ: ಅಪಾರ ಬೆಂಬಲಿಗರ ಸಾಥ್- ಕಾಂಗ್ರೆಸ್ ಅಭ್ಯರ್ಥಿ ಲೋಬೋ ನಾಮಪತ್ರ ಸಲ್ಲಿಕೆ
- Congress candidate J R Lobo files nomination for Mangaluru South
- Mangaluru South Candidate J R Lobo Files Nomination papers at MCC