ಮಂಗಳೂರು,ನ.04: ಶಾಸಕ ಶ್ರೀ ಜೆ.ಆರ್ ಲೋಬೊರವರು ಸರಕಾರಕ್ಕೆ ಸಲ್ಲಿಸಿರುವ ವಿಶೇಷ ಶಿಫಾರಸ್ಸಿನ ಮೇರೆಗೆ ಸಣ್ಣ ನೀರಾವರಿಯ ನಬಾರ್ಡ್ ಯೋಜನೆಯಡಿಯಲ್ಲಿ ರೂ 3.40 ಕೋಟಿ ಮೊತ್ತದ ಮಂಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ 10 ವಾರ್ಡ್ಗಳಲ್ಲಿ 16 ಕಾಮಗಾರಿಗಳಿಗೆ ಶಾಸಕ ಶ್ರೀ ಜೆ.ಆರ್ ಲೋಬೊರವರು ಗುದ್ದಲಿ ಪೂಜೆ ನಡೆಸಿದರು. ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪದವು ಪೂರ್ವ ವಾರ್ಡಿನಲ್ಲಿ ತಡೆಗೋಡೆ ನಿರ್ಮಾಣಕ್ಕಗಿ 25 ಲಕ್ಷ, 51ನೇ ಅಳಪೆ ಉತ್ತರ ವಾರ್ಡಿನಲ್ಲಿ ತಡೆಗೋಡೆ ಹಾಗೂ ದಂಡೆ ಸಂರಕ್ಷಣಾ ಕಾಮಗಾರಿಗೆ 45 ಲಕ್ಷ 50 ಅಳಪೆ ದಕ್ಷಿಣ ವಾರ್ಡಿನಲ್ಲಿ ತಡೆಗೋಡೆಗೆ 25 ಲಕ್ಷ, 53 ಬಜಾಲ್ ವಾರ್ಡಿನಲ್ಲಿ ದಂಡೆ ಸಂರಕ್ಷಣೆಗೆ 25 ಲಕ್ಷ, 48 ಕಂಕನಾಡಿ ವಲೆನ್ಸಿಯಾ ವಾರ್ಡಿನಲ್ಲಿ ದಂಡೆ ಸಂರಕ್ಷಣೆಗೆ 25 ಲಕ್ಷ, 21 ಪದವು ಪಶ್ಚಿಮ ವಾರ್ಡಿನಲ್ಲಿ ದಂಡೆ ಸಂರಕ್ಷಣೆ ಹಾಗು ತಡೆಗೋಡೆಗೆ 50 ಲಕ್ಷ, 37 ಮರೋಳಿ ವಾರ್ಡಿನಲ್ಲಿ ತಡೆಗೋಡೆಗೆ 25 ಲಕ್ಷದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಂಗಳೂರು ನಗರದ ಅಭಿವೃದ್ಧಿಗಾಗಿ ಇನ್ನಷ್ಟು ಅನುದಾನದ ಅವಶ್ಯಕತೆ ಇದೆ ಈಗಾಗಲೇ ಈ ಬಗ್ಗೆ ಸರಕಾರದ ಗಮನ ಸೆಳೆದಿದ್ದೇನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಬಿಡುಗಡೆ ಆಗಲಿದ್ದು ಇದು ನಗರದ ಅಭಿವ್ರದ್ದಿಗೆ ಸಹಕಾರವಾಗಲಿದೆ.
ಈ ಸಂದರ್ಭದಲ್ಲಿ ಕಾರ್ಪೋರೇಟರ್ಗಳಾದ ಬಾಸ್ಕರ ಮೊಯಿಲಿ, ಕೇಶವ ಮರೋಳಿ, ಆಶಾ ಡಿ’ಸಿಲ್ವ, ಸುಮಯ್ಯ ಆಶ್ರಪ್, ಪ್ರಕಾಶ್ ಅಳಪೆ, ಆಖಿಲಾ ಆಳ್ವ, ಹಾಗೂ ಕಾಂಗ್ರೇಸ್ ಮುಖಂಡರುಗಳಾದ ಮಾಜಿ ಉಪಮೇಯರ್ ಶ್ರೀಮತಿ ಸೇಸಮ್ಮ, ಅರುಣ್ ಕುವೆಲ್ಲೋ, ಟಿ.ಕೆ. ಸುಧೀರ್, ಡೆನ್ನಿಸ್ ಡಿ’ಸಿಲ್ವ, ರಮಾನಂದ ಪೂಜಾರಿ, ನೆಲ್ಸನ್ ಮೊಂತೇರೊ, ಕೃತಿನ್ ಕುಮಾರ್, ಬ್ಯಾಪ್ಟಿಸ್ಟ್ ಡಿ’ಸೊಜ, ಹೇಮಂತ್ ಗರೋಡಿ, ಜಗನ್ನಾಥ್ ಶೆಟ್ಟಿ, ಆಶ್ರಫ್ ಬಜಾಲ್, ಭರತೇಶ್ ಅಮೀನ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಷಣ್ಮುಗಂ, ಶೇಷಕೃಷ್ಣ, ಮೊದಲಾದವರು ಉಪಸ್ಥಿತರಿದ್ದರು.