ಮಂಗಳೂರು ನಗರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಆಲಿಸಿದರು ನಂತರ ಮಾತನಾಡಿ ನಾನು ಸರಕಾರದ ಹಿಂದುಳಿದ ವರ್ಗದ ಸದನ ಸಮಿತಿಯ ಸದಸ್ಯನಾಗಿದ್ದೇನೆ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾನಿಲ್ಲಿ ಬಂದಿದ್ದೇನೆ ನಿಮ್ಮ ಸಮಸ್ಯೆಗಳನ್ನು ಸದನ ಸಮಿತಿಯ ಮುಂದಿರಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇನೆ. ಕರ್ನಾಟಕದ ವಿವಿದ ಬಾಗಗಳಿಂದ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಮಂಗಳೂರಿಗೆ ಬರುತ್ತಿದ್ದು ಇಲ್ಲಿ ಇನ್ನಷ್ಟು ವಿದ್ಯಾರ್ಥಿ ನಿಲಯದ ಅವಶ್ಯಕತೆ ಇದೆ. ಬಡ ಮಕ್ಕಳಿಗೆ ಅನುಕೂಲವಾಗಲು ಈಗಾಗಲೇ ಹೊಸ ವಿದ್ಯಾರ್ಥಿನಿಲಯ ಆರಂಬಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ನುಡಿದರು ನಂತರ ವಿದ್ಯಾರ್ಥಿಗಳೊಡನೆ ಮುಕ್ತಸಂವಾದ ನಡೆಸಿ ಅವರು ಯಾವ ಪ್ರದೇಶದಿಂದ ಬಂದಿದ್ದಾರೆ, ಹಾಗೂ ಅವರ ವಿದ್ಯಾಬ್ಯಾಸದ ಬಗ್ಗೆ ಅವರೊಡನೆ ಚರ್ಚಿಸುತ್ತಾ ಶಾಸಕರು ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿದರು ನಾನು ಕೂಡ ಬಡ ಕುಟುಂಬದಿಂದ ಬಂದು ಖಾಸಗಿ ವಿದ್ಯಾರ್ಥಿ ನಿಲಯದಲ್ಲಿ ನಿಂತು ವಿದ್ಯಾಬ್ಯಾಸ ನಡೆಸಿದ್ದೇನೆ ಹೀಗಾಗಿ ನನಗೆ ಬಡವರ ನೋವು ತಿಳಿದಿದೆ ಕಷ್ಟಪಟ್ಟು ವಿದ್ಯಾಬ್ಯಾಸ ನಡೆಸಿ ಒಬ್ಬ ಕೆ.ಎ.ಎಸ್ ಅಧಿಕಾರಿಯಾಗಿ, ಮತ್ತು ಈಗ ಒಬ್ಬ ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ ನೀವೂ ಕೂಡ ಕೆ.ಎ.ಎಸ್, ಐ.ಪಿ.ಎಸ್, ಐ.ಎ.ಎಸ್ ನಂತಹ ಉನ್ನತ ವ್ಯಾಸಂಗ ನಡೆಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
Recent News
- ಮಂಗಳೂರು ದಕ್ಷಿಣ: ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಭರ್ಜರಿ ಬೆಂಬಲ
- ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆಗೆ ಜನಸಾಗರ
- ಮಂಗಳೂರು ದಕ್ಷಿಣ: ಅಪಾರ ಬೆಂಬಲಿಗರ ಸಾಥ್- ಕಾಂಗ್ರೆಸ್ ಅಭ್ಯರ್ಥಿ ಲೋಬೋ ನಾಮಪತ್ರ ಸಲ್ಲಿಕೆ
- Congress candidate J R Lobo files nomination for Mangaluru South
- Mangaluru South Candidate J R Lobo Files Nomination papers at MCC