ನಗರದ ಮೂಲಭೂತ ಸೌಕರ್ಯಗಳಿಗೆ ಸರಕಾರ ಹೆಚ್ಚಿನ ಒತ್ತು ಕೊಡುತ್ತದೆ. ಅದರ ಪೂರಕವಾಗಿ ಇಂದು ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಹಾಗೂ ನೀರಿನ ವ್ಯವಸ್ಥೆಗೆ ಸಾಕಷ್ಟು ಅನುದಾನವನ್ನು ನೀಡಿದ್ದೇವೆ. ರಸ್ತೆಗಳ ಅಭಿವೃದ್ಧಿ ಎಂದರೆ ಊರಿನ ಅಭಿವೃದ್ಧಿ. ನಗರದ ಹೆಚ್ಚಿನ ಒಳಭಾಗಗಳ ರಸ್ತೆಗಳಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಿದರೆ ಖಂಡಿತವಾಗಿ ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸಲು ಇಷ್ಟಪಡುತ್ತಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಶ್ರೀ ಜೆ.ಆರ್.ಲೋಬೊರವರು ಇಂದು ತಾ.17.10.2015ರಂದು ನಗರದ ಮರೋಳಿಯಲ್ಲಿರುವ ಪಟೇಲ್ ಹೌಸ್ ಹೋಲಿ ಹಿಲ್ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿಗೆ ಸುಮಾರು 8 ಲಕ್ಷ ವೆಚ್ಚವನ್ನು ಶಾಸಕರ ಅನುದಾನದ ನಿಧಿಯಲ್ಲಿ ನಡೆದ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಮಹಾನಗರಪಾಲಿಕೆ ಮೇಯರ್ ಜೆಸಿಂತಾ ವಿಜಯ ಅಲ್ಫ್ರೇಡ್, ಸ್ಥಳೀಯ ಕಾರ್ಪೊರೇಟರ್ ಹಾಗೂ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಕೇಶವ ಮರೋಳಿ, ಕಾರ್ಪೊರೇಟರ್ಗಳಾದ ಆಶಾ ಡಿ ಸಿಲ್ವಾ, ಪ್ರಕಾಶ್ ಅಳಪೆ, ಪಕ್ಷದ ಪ್ರಮುಖರಾದ ಟಿ.ಕೆ.ಸುಧೀರ್, ಗಂಗಾಧರ ಪೂಜಾರಿ, ವಿನಯ್ ಮಸ್ಕರೇನಸ್, ಎಲಿಜಬೆತ್, ಕೃತಿನ್ ಕುಮಾರ್, ನೆಲ್ಸನ್ ಮೊಂತೆರೊ, ಉದಯ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.